ADVERTISEMENT

ತ್ರಿವರ್ಣದ ದುಪ್ಪಟಾ ಧರಿಸಿದ್ದ ಪ್ರಿಯಾಂಕ ಚೋಪ್ರಾ: ಕ್ಷಮೆಯಾಚನೆಗೆ ಆಗ್ರಹ

ಏಜೆನ್ಸೀಸ್
Published 17 ಆಗಸ್ಟ್ 2017, 10:44 IST
Last Updated 17 ಆಗಸ್ಟ್ 2017, 10:44 IST
ತ್ರಿವರ್ಣದ ದುಪ್ಪಟಾ ಧರಿಸಿದ್ದ ಪ್ರಿಯಾಂಕ ಚೋಪ್ರಾ: ಕ್ಷಮೆಯಾಚನೆಗೆ ಆಗ್ರಹ
ತ್ರಿವರ್ಣದ ದುಪ್ಪಟಾ ಧರಿಸಿದ್ದ ಪ್ರಿಯಾಂಕ ಚೋಪ್ರಾ: ಕ್ಷಮೆಯಾಚನೆಗೆ ಆಗ್ರಹ   

ಮುಂಬೈ: ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ 71ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ತ್ರಿವರ್ಣದ ದುಪ್ಪಟಾ ತೊಟ್ಟಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದೇ ವಿಚಾರವಾಗಿ ಇದೀಗ ಪ್ರಿಯಾಂಕ ಚೋಪ್ರಾ ಸುದ್ದಿಯಾಗಿದ್ದಾರೆ. ತ್ರಿವರ್ಣದ ದುಪ್ಪಾಟ್ಟದೊಂದಿಗೆ ಕಾಣಿಸಿಕೊಂಡಿದ್ದ ಪ್ರಿಯಾಂಕ ಚೋಪ್ರಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕ್ಷಮೆಯಾಚಿಸಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

'ನಮ್ಮ ರಾಷ್ಟ್ರ ಧ್ವಜವನ್ನು ಗೌರವಿಸಿ, ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರ ಧ್ವಜಕ್ಕೆ ಅಗೌರವ ಸೂಚಿಸುವುದು ಸರಿಯಾಲ್ಲ. ಕೂಡಲೇ ನಿಮ್ಮ ವಿವಾದಾತ್ಮ ಪೋಸ್ಟ್‌ನ ಬಗ್ಗೆ ಕ್ಷಮೆಯಾಚಿಸಿ’ ಎಂದು ಅಭಿಮಾನಿಯೊಬ್ಬರು ಪ್ರಿಯಾಂಕ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಕೇಸರಿ, ಬಿಳಿ, ಹಸಿರು ದುಪ್ಪಟಾ ಧರಿಸಿರುವ ಫೋಟೊವನ್ನು ಇನ್‌ಸ್ಟಾಗ್ರಾಂಗೆ ಅಪ್‌ಲೋಡ್‌ ಮಾಡಿದ್ದ ಪ್ರಿಯಾಂಕ ಅವರು, ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದರು.

‘ನನ್ನ ಹೃದಯ ಭಾರತಕ್ಕಾಗಿಯೇ ಮೀಸಲು, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ, ಜೈಹಿಂದ್‌’ ಎಂದು ಬರೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.