ADVERTISEMENT

ದಿಲೀಪ್ ನಟನೆಯ ‘ರಾಮಲೀಲಾ’ಗೆ ಕೊನೆಗೂ ಪ್ರದರ್ಶನ ಭಾಗ್ಯ

ಏಜೆನ್ಸೀಸ್
Published 28 ಸೆಪ್ಟೆಂಬರ್ 2017, 13:42 IST
Last Updated 28 ಸೆಪ್ಟೆಂಬರ್ 2017, 13:42 IST
ದಿಲೀಪ್ ನಟನೆಯ ‘ರಾಮಲೀಲಾ’ಗೆ ಕೊನೆಗೂ ಪ್ರದರ್ಶನ ಭಾಗ್ಯ
ದಿಲೀಪ್ ನಟನೆಯ ‘ರಾಮಲೀಲಾ’ಗೆ ಕೊನೆಗೂ ಪ್ರದರ್ಶನ ಭಾಗ್ಯ   

ತಿರುವನಂತಪುರ: ಬಹುಭಾಷಾ ನಟಿಯೊಬ್ಬರ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧನದಲ್ಲಿರುವ ಮಲಯಾಳ ನಟ ದಿಲೀಪ್ ಅವರು ನಟಿಸಿರುವ ‘ರಾಮಲೀಲಾ’ ಚಿತ್ರ ಕೊನೆಗೂ ಗುರುವಾರ ಬಿಡುಗಡೆಯಾಗಿದೆ.

ಸುಮಾರು ₹15 ಕೋಟಿ ಬಜೆಟ್‌ನ ಈ ಚಿತ್ರಕ್ಕೆ ದಿಲೀಪ್ ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಈ ಮೊದಲು ಚಿತ್ರ ಬಿಡುಗಡೆ ದಿನಾಂಕ ಮೂರ್ನಾಲ್ಕು ಬಾರಿ ಮುಂದಕ್ಕೆ ಹೋಗಿತ್ತು. ಕೋರ್ಟ್ ಮೆಟ್ಟಿಲೇರಿದ್ದ ಚಿತ್ರದ ನಿರ್ಮಾಪಕರು ಚಲನಚಿತ್ರ ಮಂದಿರಗಳಿಗೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದರು.

ಸ್ಥಳೀಯ ರಾಜಕಾರಣಿ ಪಾತ್ರದಲ್ಲಿ ನಟ ದಿಲೀಪ್ ನಟಿಸಿದ್ದಾರೆ. ಚಿತ್ರಕ್ಕೆ ಬಹಿಷ್ಕಾರ ಹಾಕುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ನಡೆದಿತ್ತು. ಆದರೆ ದಿಲೀಪ್ ಅವರ ವಿಚ್ಛೇದಿತ ಪತ್ನಿ ಮಂಜು ವಾರಿಯರ್ ಅವರು ಚಿತ್ರ ಬಿಡುಗಡೆಗೆ ಅವಕಾಶ ನೀಡುವಂತೆ  ಮನವಿ ಮಾಡಿದ್ದರು.

ADVERTISEMENT

ಈ ನಡುವೆ ಜಾಮೀನು ನೀಡುವಂತೆ ದಿಲೀಪ್ ಐದನೇ ಬಾರಿ ಮನವಿ ಮಾಡಿದ್ದು, ಕೇರಳ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.