
ಬಿದ್ದಲ್ಲೆ ಬೇರೂರಿ ಗಗನಕ್ಕೆ ಕೈ ಎತ್ತಿ
ಹೂ ಬಿಡುವ ಗಿಡ ಮರಕೆ ವಾಸ್ತುವೆಲ್ಲಿ?
ಗುಡಿಸಲಿನ ಹೊಸಿಲಲ್ಲಿ ಬಡ ತಾಯ ಮಡಿಲಲ್ಲಿ
ನಸುನಗುವ ಮಗು ಮನಕೆ ವಾಸ್ತುವೆಲ್ಲಿ?
ಮನಸೆಂಬ ಭೂಪಟದಿ ಗಡಿ ರೇಖೆ ಇಲ್ಲ...
ಮನಸೆಂಬ ಮನೆಯಲ್ಲಿ ಗೋಡೆ ಇಲ್ಲ.
ಹರಿವ ನೀರಿನ ಹಾಗೆ ಬದುಕು ಚಲಿಸಿರುವಾಗ
ಆಣೆಕಟ್ಟೆಯ ಮಾತು ಆಡಬೇಕೆ ?
ಬೀಸೋ ಗಾಳಿಯ ಅಲೆಗೆ ವಾಸ್ತು ಏಕೆ ?
ಗಾಯ ಮಾಯಿಸುವಂತ ಬಿಸಿಲು ಬಂದಿರುವಾಗ
ಕಿಟಕಿ ಬಾಗಿಲುಗಳನು ಮುಚ್ಚಬೇಕೆ ?
ಹಕ್ಕಿ ಗೂಡಿನ ಉಲಿಗು ವಾಸ್ತು ಬೇಕೇ ?
ತುತ್ತು ಕಾಣದ ಬಳಗ ಸುತ್ತ ನಿಂತಿರುವಾಗ
ಗತ್ತು ಶ್ರೀಮಂತಿಕೆಯ ಲೋಹವೇಕೆ?
ಅಮ್ಮ ಹಚ್ಚಿದ ಒಲೆಗೂ ವಾಸ್ತು ಬೇಕೇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.