ADVERTISEMENT

ಇಂದಿರೆಯ ಕಥನದತ್ತ ವಿದ್ಯಾ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST
ಇಂದಿರೆಯ ಕಥನದತ್ತ ವಿದ್ಯಾ
ಇಂದಿರೆಯ ಕಥನದತ್ತ ವಿದ್ಯಾ   

`ದಿ ಡರ್ಟಿ ಪಿಕ್ಚರ್~ ಚಿತ್ರದ ಯಶಸ್ಸಿನ ಗುಂಗಿನಿಂದ ಹೊರ ಬಂದಿರುವ ವಿದ್ಯಾ ತಮ್ಮ ಕನಸಿನ ರೋಲ್ ಬಗೆಗಿನ ಬಯಕೆ ಬಿಚ್ಚಿಟ್ಟಿದ್ದಾರೆ.

`ಅರ್ಥ್~ ಚಿತ್ರದಲ್ಲಿ ಶಬಾನಾ ಆಜ್ಮಿ ನಟಿಸಿದಂಥ ಪಾತ್ರಗಳು ಬೇಕು. ಸದ್ಯಕ್ಕೆ ವಿವಾಹೇತರ ಸಂಬಂಧಗಳ ಕುರಿತು ಒಳನೋಟಗಳಿರುವ ಸೂಕ್ಷ್ಮ ಸಂವೇದಿ ಚಿತ್ರಗಳ ಅಗತ್ಯವಿದೆ. ಅಂಥ ಚಿತ್ರದಲ್ಲಿ ನಟಿಸುವಾಸೆ ಇದೆ ಎಂದು ಹೇಳಿದ್ದಾರೆ. ಇಂದಿರಾಗಾಂಧಿ ಅವರ ಆತ್ಮಕಥನದ ಚಿತ್ರದಲ್ಲಿಯೂ ನಟಿಸುವಾಸೆಯನ್ನು ವಿದ್ಯಾ ಬಿಚ್ಚಿಟ್ಟಿದ್ದಾರೆ.

ಇವೆರಡನ್ನೂ ಹೊರತುಪಡಿಸಿದರೆ ತಮ್ಮ ಕೆರಿಯರ್‌ನಲ್ಲಿ ಒಮ್ಮೆ ಗುಲ್ಜಾರ್ ಜೊತೆಗೆ ಕೆಲಸ ಮಾಡುವ ಮಹದಿಚ್ಛೆಯನ್ನೂ ವ್ಯಕ್ತಪಡಿಸಿದ್ದಾರೆ. ಕವಿ ಹೃದಯದ ಗುಲ್ಜಾರ್ `ಪರಿಚಯ್~, `ಅಂಗೂರ್~, `ಮಾಚಿಸ್~, `ಹು ತು ತು~ಗಳಂಥ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರೊಂದಿಗೆ ಎರಡೆರಡು ಚಿತ್ರಗಳಲ್ಲಿ ನಟಿಸಿದ ಅದೃಷ್ಟ ತಬ್ಬುಗೆ ಮಾತ್ರ ದೊರೆತಿದೆ. ಒಂದಾದರೂ ಚಿತ್ರದಲ್ಲಿ ಅವಕಾಶ ಸಿಗಲಿ ಎಂಬ ತಮ್ಮ ಬಯಕೆಯನ್ನು ವಿದ್ಯಾ ಬಿಚ್ಚಿಟ್ಟಿದ್ದಾರೆ. ದಕ್ಷಿಣ ಚಿತ್ರ ರಂಗಕ್ಕೆ ಬರುವ ಇರಾದೆ ಇದೆಯೇ? ಎಂಬ ಪ್ರಶ್ನೆಗೆ ವಿದ್ಯಾ `ದಕ್ಷಿಣದಲ್ಲಿ ನಟಿಯರಿಗಾಗಿ ಯಾವ ಪಾತ್ರವನ್ನೂ ಸೃಷ್ಟಿಸುವುದಿಲ್ಲ~ ಎಂದೂ ಉತ್ತರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.