ADVERTISEMENT

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST
ಈ ವಾರ ತೆರೆಗೆ
ಈ ವಾರ ತೆರೆಗೆ   

ಒಂದು ಮೊಟ್ಟೆಯ ಕಥೆ
ಬೊಕ್ಕ ತಲೆಯ, ಕನ್ನಡ ಪ್ರಾಧ್ಯಾಪಕನ ಜೀವನವನ್ನು ಕಥಾವಸ್ತು ಆಗಿಸಿಕೊಂಡು ಸಿದ್ಧಪಡಿಸಿರುವ ಚಿತ್ರ ಇದು. ಇದರ ನಿರ್ಮಾಣ 'ಪವನ್ ಕುಮಾರ್ ಸ್ಟುಡಿಯೋಸ್‌'ನಿಂದ ಆಗಿದೆ. ರಾಜ್ ಬಿ. ಶೆಟ್ಟಿ ಅವರು ಸಿನಿಮಾ ನಿರ್ದೇಶನ ಮಾಡಿ, ಪ್ರಮುಖ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ, ಮಿಧುನ್ ಮುಕುಂದನ್ ಸಂಗೀತ ಈ ಚಿತ್ರಕ್ಕಿದೆ. ಉಷಾ ಭಂಡಾರಿ, ಶೈಲಶ್ರೀ, ಪ್ರಕಾಶ್ ತುಮಿನಾಡು ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

ಹೊಂಬಣ್ಣ
ರಾಮಕೃಷ್ಣ ನಿಗಡೆ ನಿರ್ಮಿಸಿರುವ ಚಿತ್ರ ಇದು. ಇದರ ನಿರ್ದೇಶನ ರಕ್ಷಿತ್ ತೀರ್ಥಹಳ್ಳಿ ಅವರದ್ದು. ವಿನು ಮನಸು ಸಂಗೀತ, ಪ್ರವೀಣ್ ಎಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸುಬ್ಬು ತಲಬಿ, ಧನು ಗೌಡ, ವರ್ಷ ವಿ ಆಚಾರ್ಯ, ಶರ್ಮಿತಾ ಶೆಟ್ಟಿ, ಸುಚೇಂದ್ರ ಪ್ರಸಾದ್, ದತ್ತಣ್ಣ, ನೀನಾಸಂ ಅಶ್ವತ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ.

ಕೋಲಾರ
ಆರ್. ಲಕ್ಷ್ಮೀನಾರಾಯಣಗೌಡ ಮತ್ತು ರಮೇಶ್ ಆರ್ ನಿರ್ಮಾಣದ ಚಿತ್ರ ಇದು. ಇದರ ನಿರ್ದೇಶನ ಆರ್ಯ ಮಹೇಶ್ ಅವರದ್ದು. ದರ್ಶನ್ ಕನಕ ಛಾಯಾಗ್ರಹಣ, ಹೇಮಂತ್ ಕುಮಾರ್ ಬಿ.ಆರ್ ಅವರ ಸಂಗೀತ ಈ ಚಿತ್ರಕ್ಕಿದೆ. ಯೋಗೀಶ್, ನಯನ ಸಾವರ್, ಆದಿತ್ಯ (ಹೈದರಾಬಾದ್), ನಾನ್ ಕಡವುಳ್ ರಾಜೇಂದ್ರ (ಚೆನ್ನೈ), ಸಂಗೀತಾ ಬಾಲನ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ.

ADVERTISEMENT

ಕಥಾ ವಿಚಿತ್ರ
ಕೆ. ಸುಧಾಕರ್ ನಿರ್ಮಾಣದ ಕಥಾವಿಚಿತ್ರ ಚಿತ್ರದ ನಿರ್ದೇಶಕರು ಅನುಪ್ ಅಂತೋಣಿ. ಅಭಿಲಾಶ್ ಕಲಾತಿ ಛಾಯಾಗ್ರಹಣ, ಮ್ಯಾಥ್ಯುಸ್ ಮನು ಸಂಗೀತ ಈ ಚಿತ್ರಕ್ಕಿದೆ. ಹರ್ಷವರ್ಧನ್, ಅನು, ಹ್ಯಾರಿ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.