ADVERTISEMENT

ಕೃಷ್ಣನಿಗೆ ಮತ್ತೊಮ್ಮೆ ಗೆಲುವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 19:30 IST
Last Updated 8 ಸೆಪ್ಟೆಂಬರ್ 2011, 19:30 IST
ಕೃಷ್ಣನಿಗೆ ಮತ್ತೊಮ್ಮೆ ಗೆಲುವು
ಕೃಷ್ಣನಿಗೆ ಮತ್ತೊಮ್ಮೆ ಗೆಲುವು   

`ನಮ್ಮ ಚಿತ್ರಕ್ಕೆ ಮೊದಲ ವಾರ 70 ಲಕ್ಷ ಷೇರು ಬಂತು. ನಾಲ್ಕು ವಾರದ ನಂತರ ಹಾಕಿದ ಹಣ ಸಿಕ್ಕಿತು. 25 ಚಿತ್ರಮಂದಿರಗಳಲ್ಲಿ 25 ದಿನ ಓಡಿತು. ಬೆಂಗಳೂರಿನ ಸಾಗರ್ ಚಿತ್ರಮಂದಿರದಲ್ಲಿ 50 ದಿನ ಪೂರೈಸಿದರೆ, ಪಿವಿಆರ್‌ನಲ್ಲಿ 45 ದಿನ ಜನ ನೋಡಿದರು~- ನಿರ್ಮಾಪಕ ವಿಜಯ್ ಕುಮಾರ್ `ಕೃಷ್ಣನ್ ಮ್ಯಾರೇಜ್ ಸ್ಟೋರಿ~ಯ ಯಶೋಗಾಥೆಯನ್ನು ಕೆಲವೇ ಪದಗಳಲ್ಲಿ ಬಣ್ಣಿಸಿದ್ದು ಹೀಗೆ.

ಮೊದಲ ಚಿತ್ರದ ಗೆಲುವಿನಲ್ಲೂ ನಿರ್ದೇಶಕ ನೂತನ್‌ಉಮೇಶ್ ಯಾಕೋ ಮಂಕಾಗಿದ್ದರು. `ಚಿತ್ರದ ಛಾಯಾಗ್ರಹಣ, ಸಂಗೀತ ಹಾಗೂ ಕೂಡುಕುಟುಂಬದ ಭಾವನೆಗಳು ಜನರಿಗೆ ಇಷ್ಟವಾದವು. ನಮ್ಮ ಚಿತ್ರವನ್ನು ಗೆಲ್ಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ~ ಎಂದು ಉಮೇಶ್ ಭಾಷಣದ ಶೈಲಿಯಲ್ಲಿ ಮಾತು ಪ್ರಾರಂಭಿಸಿದರು.

ಚಿತ್ರೀಕರಣ ಪ್ರಾರಂಭವಾದ ಮೊದಲ ದಿನ ತಂಡದಲ್ಲಿ ಇದ್ದ ಹೊಂದಾಣಿಕೆ ಕಂಡೇ ತಮ್ಮ ಕಣ್ಣಲ್ಲಿ ಆನಂದಬಾಷ್ಪ ತುಂಬಿಕೊಂಡಿತು ಎಂದು ಫ್ಲಾಷ್‌ಬ್ಯಾಕ್‌ಗೆ ಜಿಗಿದವರು ನಟ ಬಾಲರಾಜ್. ಯಶಸ್ಸಿಗೆ ನಿರ್ದೇಶಕರ ಹೋಂವರ್ಕ್ ಕಾರಣ ಎಂದವರು ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್.

ಸಿನಿಮಾ ಯಶಸ್ಸಿನ ಔತಣಕೂಟದಲ್ಲಿ ಅಜಯ್ ರಾವ್ ನಿಜ ಬದುಕಿನ `ಮ್ಯಾರೇಜ್ ಸ್ಟೋರಿ~ಯ ಪ್ರಸ್ತಾಪವಾಯಿತು. `ಮದುವೆಯನ್ನು ಮುಂದೂಡಲಾಗಿದೆ~ ಎಂಬುದು ಅವರ ಪ್ರತಿಕ್ರಿಯೆ. ಇದಕ್ಕೆ ಕಾರಣ- ಬದುಕಲ್ಲಿ ಅವರಿನ್ನೂ ಭದ್ರವಾಗಿ ನೆಲೆ ನಿಂತಿಲ್ಲವಂತೆ! ್ಢ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.