ADVERTISEMENT

ಕೇಡಿಗಳು ಹಾಡುಗಳಿಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

`ಕೇಡಿಗಳು~ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ. ಇದೀಗ ಐದು ಹಾಡುಗಳು ಹಾಗೂ ಮೂರು ಸಾಹಸ ಸನ್ನಿವೇಶಗಳನ್ನು ಕೋಲಾರ ಹಾಗೂ ಬೆಂಗಳೂರಿನ  ಸುತ್ತಮುತ್ತ ಸೆರೆಹಿಡಿಯಲು ಸಿದ್ಧತೆ ನಡೆದಿದೆ. ಭರತ್ ಕುಮಾರ್ ಹಾಗೂ ಜಿ.ವೈ. ವಾಸುದೇವ್ ನಿರ್ಮಾಪಕರು. 

ಜುಲೈನಲ್ಲಿ ಚಿತ್ರವನ್ನು ಸಿದ್ಧಪಡಿಸಿ ತೆರೆಗೆ ಅರ್ಪಿಸಲು ಚಿತ್ರತಂಡ ತೀರ್ಮಾನಿಸಿದೆ. ಹಾಲಿವುಡ್‌ನ ಸಿಡ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ಪರಿಣತಿ ಪಡೆದು ಬಂದಿರುವ ಪರಮಶಿವ ಅವರ ನಿರ್ದೇಶನದ ಮೊದಲ ಸಿನಿಮಾ ಇದು. ಡ್ರಗ್ ಮಾಫಿಯಾ ಹಳ್ಳಿಯವರನ್ನು ಹೇಗೆ ಕಂಗಾಲಾಗಿಸಿಬಿಡುತ್ತದೆ ಎಂಬುದು ಪರಮಶಿವ ಮಾಡಿಕೊಂಡಿರುವ ಕಥಾಹಂದರ.

ತಾರಾಗಣದಲ್ಲಿ ಕೃಷ್ಣ, ಶ್ವೇತಾ,  ಸವಿತಾ ಕೃಷ್ಣಮೂರ್ತಿ, ಸೌಭಾಗ್ಯ ಹಾಗೂ ಇನ್ನಿತರರು ಇದ್ದಾರೆ. ಅರುಣ್ ವಿ. ಶ್ರಿನಿವಾಸ್  ಸಂಗೀತ, ವಿಕ್ರಮ್ ಯೋಗಾನಂದ ಛಾಯಾಗ್ರಹಣ ಈ ಚಿತ್ರಕ್ಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.