ADVERTISEMENT

ಕೋಟ್ಯಾಧಿಪತಿಯಲ್ಲಿ ಮಾಲಾಶ್ರೀ

ಪಂಚರಂಗಿ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಸುವರ್ಣ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುರುವ `ಕನ್ನಡದ ಕೋಟ್ಯಾಧಿಪತಿ' ಸರಣಿಯಲ್ಲಿ ಯುಗಾದಿ (ಏ.11)ಯಂದು ಸ್ಯಾಂಡಲ್‌ವುಡ್‌ನ `ಕನಸಿನ ರಾಣಿ' ಮಾಲಾಶ್ರೀ ಅವರು ಹಾಟ್ ಸೀಟ್‌ಗೆ ಬರಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಶ್ನೋತ್ತರಗಳ ಜತೆಗೆ, ಮಾಲಾಶ್ರೀಗೆ ಹೆಸರು ತಂದುಕೊಟ್ಟ ಹಾಡುಗಳಲ್ಲೊಂದಾದ `ಜಟಕಾ ಕುದುರೆ ಹತ್ತಿ ಪ್ಯಾಟೆಗ್ ಹೋಗುಮಾ' ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ತಮ್ಮ ಮತ್ತು ಕುಟುಂಬದ ಬಗ್ಗೆ, ಸ್ನೇಹಿತರ ಬಗ್ಗೆ ಅನೇಕ ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಅವರ ಒಡಹುಟ್ಟಿದ ತಂಗಿ ಶುಭಶ್ರಿ (ಚಿರಬಾಂಧವ್ಯ ಚಿತ್ರದ ನಾಯಕಿ) ಅಕ್ಕನ ಬಗ್ಗೆ ಮಾತನಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.