ADVERTISEMENT

ಗೋವಿಂದ ಇಪ್ಪತ್ತೈದು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

`ಗೋವಿಂದಾಯ ನಮಃ~ಕ್ಕೆ ಈಗ ಬೆಳ್ಳಿಹಬ್ಬ. ಅಂದರೆ ಚಿತ್ರ 25 ವಾರ ಪೂರೈಸಿದೆ ಎಂದರ್ಥವಲ್ಲ. 25 ದಿನಗಳನ್ನಂತೂ ಯಾವುದೇ ಅಡ್ಡಿ ಆತಂಕಗಳಿಲ್ಲದೆ ದಾಟಿದೆ. ಚಿತ್ರತಂಡದ ಪ್ರಕಾರ ಚಿತ್ರದ ಖ್ಯಾತಿಯೂ ದಿನೇ ದಿನೇ ಹೆಚ್ಚುತ್ತಿದೆಯಂತೆ. ಇಪ್ಪತ್ತೈದು ತುಂಬಿದ ಖುಷಿಗೆ ನಿರ್ಮಾಪಕ ಕೆ.ಎ.ಸುರೇಶ್ ಇತ್ತೀಚೆಗೆ ಚಿತ್ರದ ಸೆಲೆಬ್ರಿಟಿ ಪ್ರದರ್ಶನ ಏರ್ಪಡಿಸಿದ್ದರು.

ಪ್ರದರ್ಶನಕ್ಕೆ ಪ್ರೇಮ್ ಕುಮಾರ್, ಚಿರಂಜೀವಿ ಸರ್ಜಾ, ಶ್ವೇತಾ, ಮಹೇಶ್ ಬಾಬು, ನಿರ್ದೇಶಕ ಪ್ರೇಮ್, ಯೋಗರಾಜ್ ಭಟ್, ಸಂಗೀತ ನಿರ್ದೇಶಕ ಗುರುಕಿರಣ್ ಮತ್ತಿತರರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ `ಗೋವಿಂದ 25~ ಕೇಕ್ ಒಂದನ್ನು ಕತ್ತರಿಸಿ ಸಂತಸ ವಿನಿಮಯ ಮಾಡಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.