ADVERTISEMENT

ಜನರ ಕೋಪ ಮೆಚ್ಚಿದ ಜೂಹಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST
ಜನರ ಕೋಪ ಮೆಚ್ಚಿದ ಜೂಹಿ
ಜನರ ಕೋಪ ಮೆಚ್ಚಿದ ಜೂಹಿ   

ಗುಲಾಬಿ ಗ್ಯಾಂಗ್ ಚಿತ್ರದಲ್ಲಿ ಇದೇ ಮೊದಲ ಬಾರಿ ಖಳನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಜೂಹಿ ಚಾವ್ಲಾ ತಮ್ಮ ಅಭಿನಯಕ್ಕೆ ಬಂದಿರುವ ಪ್ರತಿಕ್ರಿಯೆ ಬಗ್ಗೆ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ‘ಈ ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಎಲ್ಲರೂ ನನ್ನನ್ನು ದ್ವೇಷಿಸುತ್ತಿದ್ದಾರೆ. ನನಗಿದು ಬಹಳ ಇಷ್ಟವಾಗಿದೆ’ ಎಂದು ಜೂಹಿ ಟ್ವೀಟ್‌ ಮಾಡಿದ್ದಾರೆ.

‘ಈ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ನಾನು ಖುಷಿಯಾಗಿದ್ದೇನೆ. ಸಿನಿಮಾವನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದೂ ಅವರು ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಹಿಂಸಾತ್ಮಕ ಚಳವಳಿ ಆರಂಭಿಸಿದ ಸಂಪತ್‌ ಪಾಲ್‌ ಅವರ ಜೀವನವನ್ನು ಆಧರಿಸಿದ ಚಿತ್ರ ‘ಗುಲಾಬ್‌ ಗ್ಯಾಂಗ್‌’. ಗುಲಾಬಿ ಸೀರೆ ಉಟ್ಟ ವನಿತೆಯರು ವರದಕ್ಷಿಣೆ, ಹೆಣ್ಣುಮಕ್ಕಳ ಶೋಷಣೆ ವಿರುದ್ಧ ಹೋರಾಡುವ ಒಂದು ಮಹಿಳೆಯರ ಸಮೂಹ ಇದಾಗಿದೆ. ಮಾಧುರಿ ದೀಕ್ಷಿತ್‌ ಅವರೂ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಮಹಿಳಾ ಪ್ರಧಾನವಾದ ಚಿತ್ರವೊಂದರಲ್ಲಿ ಜೂಹಿ ಖಳನಾಯಕಿಯಾಗಿ ಕಾಣಿಸಿಕೊಂಡಿರುವುದು ಪ್ರೇಕ್ಷಕ್ಷರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಈ ಚಿತ್ರ ಅಂತರರಾಷ್ಟ್ರೀಯ ಮಹಿಳಾ ದಿನ (ಮಾ.8)ದಂದು ಬಿಡುಗಡೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.