ADVERTISEMENT

ಜನ್ನ ಸಾಹಿತ್ಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಬೆಂಗಳೂರು ನಾರ್ಥ್‌ ಎಜುಕೇಶನ್‌ ಸೊಸೈಟಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎರಡು ದಿನಗಳ ‘ಜನ್ನ ಸಾಹಿತ್ಯ ಸಂಭ್ರಮ’ ರಾಷ್ಟ್ರೀಯ ವಿಚಾರಣ ಸಂಕಿರಣ. ಸೆಪ್ಟೆಂಬರ್‌ 13 ಮತ್ತು 14ರಂದು ಈ ಕಾರ್ಯಕ್ರಮ ನಡೆಯಲಿದ್ದು, ಶುಕ್ರವಾರ ಬೆಳಿಗ್ಗೆ 9ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಉದ್ಘಾಟಿಸಲಿದ್ದಾರೆ.

ಅಧ್ಯಕ್ಷತೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಅತಿಥಿಗಳು: ಕಸಾಪ ಅಧ್ಯಕ್ಷ ಡಾ. ಪುಂಡಲೀಕ ಹಾಲಂಬಿ, ಪ್ರಧಾನ ಕಾರ್ಯದರ್ಶಿ ಬಸವರಾಜು, ಸಾಹಿತಿ ಲಕ್ಷ್ಮೀಶ ತೋಳ್ಪಾಡಿ.

ಬೆಳಿಗ್ಗೆ 10.30ಕ್ಕೆ ನಡೆವ ಗೋಷ್ಠಿ 1ರ ಅಧ್ಯಕ್ಷತೆಯನ್ನು ಮಾನಸ ಗಂಗೋತ್ರಿಯ ಕುವೆಂಪು ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎನ್‌.ಎಂ.ತಳವಾರ ಅವರು ವಹಿಸಲಿದ್ದಾರೆ. ಪ್ರಾಧ್ಯಾಪಕಿ ಡಾ. ಶೀಲಾದೇವಿ ಎಸ್‌. ಮಳಿಮಠ ಅವರು ‘ಜನ್ನನ ಕಾಲ–ದೇಶಾದಿ ಪೂರ್ವೋತ್ತರಗಳು’ ಕುರಿತು, ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಳು ಅವರು ‘ಪ್ರಾಚೀನ ಸಾಹಿತ್ಯದಲ್ಲಿ ಜನ್ನನ ಸ್ಥಾನಮಾನ’ ವಿಷಯದ ಕುರಿತು ಮಾತನಾಡಲಿದ್ದಾರೆ.

ಪ್ರಾಧ್ಯಾಪಕ ಡಾ. ಶ್ರೀರಾಮಭಟ್ಟ ಅವರು ‘ಸಂಸ್ಕೃತದ ವಾದಿರಾಜ– ಕನ್ನಡದ ಜನ್ನ–ಆಶಯ ಸ್ವರೂಪಗಳು’ ಕುರಿತು ಚರ್ಚಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ನಡೆವ ಗೋಷ್ಠಿ 2ರ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಕೆ.ಎಸ್‌. ಕಣ್ಣನ್‌ ವಹಿಸಲಿದ್ದಾರೆ. ಪ್ರಾಧ್ಯಾಪಕ ಡಾ. ಎಸ್‌.ಎನ್‌ ಪ್ರಾಣೇಶ್‌ ಅವರು ‘ಕನ್ನಡ ಮತ್ತು ಯಶೋಧರ ಚರಿತೆ ಮತ್ತು ಸಂಸ್ಕೃತ ಯಶೋಧರ ಚರಿತೆಯ ಆಶಯ’ ಕುರಿತು, ಪ್ರೊ. ನಾರಾಯಣ ಘಟ್ಟ ಅವರು ‘ವಾದಿರಾಜನ ಯಶೋಧರ ಚರಿತೆಯ ಆಕೃತಿ ವಿಚಾರ’ ಕುರಿತು ಚರ್ಚಿಸಲಿದ್ದಾರೆ.

ಡಾ .ವಿ. ಪರಮಶಿವಮೂರ್ತಿ ಅವರು ‘ಜನ್ನನ ಅನಂತನಾಥ ಪುರಾಣದ ಭವಾವಳಿಗಳ ನಿರೂಪಣೆ’ ಹಾಗೂ ಡಾ. ಶ್ರೀಪಾದ ಭಟ್‌ ಅವರು ‘ಜನ್ನನ ಯಶೋಧರ ಚರಿತೆಯ ಆಕೃತಿ ವಿಚಾರ’ದ ಕುರಿತು ಚರ್ಚಿಸಲಿದ್ದಾರೆ.
ಸ್ಥಳ: ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಗಾಂಧೀ ಭವನ, ಕುಮಾರಕೃಪಾ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.