ADVERTISEMENT

ಜಹೀರ್-ಇಷಾ ಮದುವೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 19:30 IST
Last Updated 21 ಏಪ್ರಿಲ್ 2011, 19:30 IST

ಕ್ರಿಕೆಟ್ ವಿಶ್ವಕಪ್ ಗೆದ್ದು ಬಂದ ಆಟಗಾರರ ಹುಮ್ಮಸ್ಸು ಇನ್ನೂ ಕಡಿಮೆಯಾಗಿಲ್ಲ. ಇದೇ ಸಂತೋಷದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಜಹೀರ್ ಖಾನ್ ಮದುವೆಯಾಗುತ್ತಿರುವ ಸುದ್ದಿ ಬಂದಿದೆ. ಅವರು ತಮ್ಮ ಬಹುದಿನಗಳ ಗೆಳತಿ ಬಾಲಿವುಡ್ ನಟಿ, ರೂಪದರ್ಶಿ ಇಷಾ ಶರ್ವಾಣಿಯನ್ನು ವರಿಸುತ್ತಿದ್ದಾರೆ.

2007ರಿಂದ ಜಹೀರ್ ಹೆಸರು ಇಷಾ ಜೊತೆ ತಳುಕು ಹಾಕಿಕೊಂಡಿತ್ತು. ರೂಪದರ್ಶಿಯಾಗಿದ್ದ ಇಷಾ ಸುಭಾಷ್ ಘಾಯ್ ಅವರ ‘ಕಿಸ್ನಾ’ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಅದು ವಿಫಲವಾದರೂ ಆಕೆಯ ನೃತ್ಯ ಸಾಮರ್ಥ್ಯ ಗಮನಸೆಳೆದಿತ್ತು. ನಂತರ ‘ದರ್ವಾಜಾ ಬಂದ್ ರಖೋ’, ‘ರಾಕಿ’, ‘ಗುಡ್ ಬಾಯ್ ಬ್ಯಾಡ್ ಬಾಯ್’, ‘ಯು ಮಿ ಔರ್ ಹಮ್’, ‘ಲಕ್ ಬೈ ಚಾನ್ಸ್’ ಚಿತ್ರಗಳಲ್ಲಿ ನಟಿಸಿದರೂ ಆಕೆ ಮುಂಚೂಣಿಗೆ ಬರಲಿಲ್ಲ. ಕೆಲವು ಬಂಗಾಳಿ ಚಿತ್ರಗಳಲ್ಲೂ ನಟಿಸಿದ ಆಕೆ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.