ಜಾಕ್ವೆಲಿನ್ ಜತೆ ಪ್ರಣಯ ದೃಶ್ಯಗಳಲ್ಲಿ ಪಾಲ್ಗೊಳ್ಳಲು ಸಲ್ಮಾನ್ ಖಾನ್ ಸ್ಪಷ್ಟವಾಗಿ ನಿರಾಕರಿಸಿರುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. `ಕಿಕ್' ಚಿತ್ರದ ಮೂಲಕ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಜೋಡಿ ಇದೇ ಮೊದಲ ಬಾರಿಗೆ ನಟಿಸುತ್ತಿದ್ದು, ಚಿತ್ರೀಕರಣದ ಸಮಯದಲ್ಲೇ ಗಾಸಿಪ್‌ಗಳು ಹರಿದಾಡಲು ಆರಂಭಿಸಿವೆ.
`ಕಿಕ್' ಚಿತ್ರದ ಪ್ರಣಯ ದೃಶ್ಯವನ್ನು ತೆಗೆದು ಹಾಕುವ ಅಥವಾ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಬೇಕು ಎಂದು ನಿರ್ದೇಶಕ ಸಾಜಿದ್ ನಾಡಿಯಾವಾಲಾ ಅವರಲ್ಲಿ ಸಲ್ಮಾನ್ ಕೇಳಿಕೊಂಡರಂತೆ ಎಂದು ಹೇಳಲಾಗುತ್ತಿದೆ.
`ಅಂಥ ದೃಶ್ಯ ಎಲ್ಲಿತ್ತು ಎಂಬುದೇ ನನಗೆ ತಿಳಿದಿಲ್ಲ. ನಾನು ಚಿತ್ರಕಥೆ ಓದಿದಂತೆ ಆ ರೀತಿಯ ದೃಶ್ಯ ಇರಲೇ ಇಲ್ಲ. ಹಾಗಿದ್ದರೂ ಅದು ಏಕೆ ಸುದ್ದಿಯಾಯಿತು ಎನ್ನುವುದು ತಿಳಿಯದು' ಎಂದಿದ್ದಾರೆ ಜಾಕ್ವೆಲಿನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.