ವೆಸ್ಟ್‌ಇಂಡೀಸ್ ಕ್ರಿಕೆಟಿಗ ಡ್ವೇನ್ ಜಾನ್ ಬ್ರಾವೊ ತಮಿಳುನಾಡಿನಲ್ಲಿ ಸಿನಿಮಾ ಚಿತ್ರೀಕರಣವೊಂದರಲ್ಲಿ ನಿರತರಾಗಿದ್ದಾರೆ.
ಸಾಮಾಜಿಕ ಕಾಳಜಿಯನ್ನು ಒಳಗೊಂಡ ಕಿರುಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ.
ಚೆನ್ನೈ ಸೂಪರ್‌ಕಿಂಗ್ಸ್ ತಂಡದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿದ್ದ ಬ್ರಾವೊ, ಚೆನ್ನೈನ ಅಭಿಮಾನಿಗಳಿಗೆ ಹಾಟ್ ಫೇವರೇಟ್ ಎನಿಸಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ಮಾಡಿದ ಮೋಡಿಯನ್ನು ಸಿನಿಮಾದಲ್ಲೂ ಮಾಡಲಿದ್ದಾರೆ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.