ADVERTISEMENT

ಬೊಂಬಾಟ್ ಬಾಲಿವುಡ್

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಹಾಲಿವುಡ್‌ಗೆ ಜಾಕ್ವೆಲಿನ್?

`ಮರ್ಡರ್-2~ ಚಿತ್ರದ ಮೂಲಕ ಬಾಲಿವುಡ್ ಗಮನ ಸೆಳೆದ ಶ್ರೀಲಂಕಾದ ರೂಪದರ್ಶಿ ಜಾಕ್ವೆಲಿನ್ ಫರ್ನಾಂಡಿಸ್ ಹಾಲಿವುಡ್‌ನಲ್ಲಿ ನಟಿಸಲು ಹೊರಟ ಸುದ್ದಿ ಬಂದಿದೆ.

`ಡೆಫ್‌ನಿಶನ್ ಆಫ್ ಫಿಯರ್~ ಹೆಸರಿನ ಈ ಚಿತ್ರಕ್ಕೆ ನಿರ್ಮಾಪಕ ಜೇಮ್ಸ ಸಿಂಪ್ಸನ್ ಹಣ ಹೂಡುತ್ತಿದ್ದಾರೆ.

`ತಮ್ಮನ್ನು ಈ ಚಿತ್ರದಲ್ಲಿ ನಟಿಸುವಂತೆ ಕರೆದಿರುವುದು ದಿಟ. ಆದರೆ ಇನ್ನೂ ಕತೆಯ ಚರ್ಚೆ ನಡೆಯುತ್ತಿದೆ. ಈಗಲೇ ನಿರ್ಧಾರವನ್ನು ಬಹಿರಂಗಪಡಿಸಲಾರೆ~ ಎನ್ನುವುದು ಹಾಲಿವುಡ್ ಪಯಣದ ಬಗ್ಗೆ ಜಾಕ್ವೆಲಿನ್ ಪ್ರತಿಕ್ರಿಯೆ.
 

ಅಂದಹಾಗೆ, ತಾವು ನಟಿಸಿರುವ ಬಹುತಾರಾಗಣದ `ಹೌಸ್‌ಫುಲ್-2~ ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವುದರಿಂದ, ಅದರ ಪ್ರಚಾರ ಕಾರ್ಯದಲ್ಲಿ ಜಾಕ್ವೆಲಿನ್ ಬಿಜಿಯಾಗಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.