ADVERTISEMENT

ಮಕಾವ್ ಹಾದಿಯತ್ತ ದೀಪಿಕಾ ಚಿತ್ತ

​ಪ್ರಜಾವಾಣಿ ವಾರ್ತೆ
Published 23 ಜೂನ್ 2013, 19:59 IST
Last Updated 23 ಜೂನ್ 2013, 19:59 IST

ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಕನ್ನಡದ ಪ್ರತಿಭೆ ದೀಪಿಕಾ ಪಡುಕೋಣೆ ಈಗ ಮತ್ತಷ್ಟು ಸಂತಸದಲ್ಲಿದ್ದಾರೆ. `ಯೇ ಜವಾನಿ ಹೈ ದಿವಾನಿ' ಚಿತ್ರ ಗೆದ್ದ ಬೆನ್ನಲ್ಲೇ ಅವರ ಪ್ರತಿಭೆಗೆ ಈಗ ಮತ್ತೊಂದು ವೇದಿಕೆ ಸಜ್ಜಾಗಿದೆ. ಮಕಾವ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ (ಐಐಎಫ್‌ಎ)ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೀಪಿಕಾ ಕಾರ್ಯಕ್ರಮವೊಂದನ್ನು ನೀಡಲಿದ್ದಾರೆ.

`ಅಂಗ್ರೇಜಿ ಬೀಟ್ಸ್', `ತುಮ್ ಹಿ ಹೋ ಬಂಧು' ಹಾಗೂ ಇತ್ತೀಚಿನ `ಬಲಮ್ ಪಿಚ್ಕಾರಿ' ಗೀತೆಗಳಿಗೆ ಈಗಾಗಲೇ ನೃತ್ಯಾಭ್ಯಾಸ ಆರಂಭಿಸಿದ್ದಾರಂತೆ. `ಈ ಬಾರಿಯ ಐಐಎಫ್‌ಎ ಕಾರ್ಯಕ್ರಮ ಕುರಿತು ಕುತೂಹಲ ಹೆಚ್ಚಾಗಿದೆ. ಮಕಾವ್‌ಗೆ ಇದು ನನ್ನ ಮೊದಲ ಭೇಟಿ. ಜತೆಗೆ ನನ್ನಿಷ್ಟದ ಹಾಡುಗಳಿಗೆ ಹೆಜ್ಜೆ ಹಾಕುವುದನ್ನು ಅಭಿಮಾನಿಗಳೂ ಒಪ್ಪುತ್ತಾರೆ ಎನ್ನುವ ವಿಶ್ವಾಸವಿದೆ' ಎಂದು ದೀಪಿಕಾ ನುಡಿದಿದ್ದಾರೆ.

ಜುಲೈ 6ರಿಂದ ಐಐಎಫ್‌ಎ ಪ್ರಶಸ್ತಿ ಪ್ರದಾನ ಸಮಾರಂಭದ 14ನೇ ಆವೃತ್ತಿ ಆರಂಭವಾಗಲಿದೆ. ಬಾಲಿವುಡ್‌ನ ಚಿತ್ತ ಈಗ ಮಕಾವ್‌ನತ್ತ ನೆಟ್ಟಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.