ADVERTISEMENT

ಮುತ್ತುರಾಜನ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST
ಮುತ್ತುರಾಜನ ದರ ಏರಿಕೆ
ಮುತ್ತುರಾಜನ ದರ ಏರಿಕೆ   

ಬಾಲಿವುಡ್‌ನ `ಮುತ್ತು~ ರಾಜ್ ಎಂದೇ ಹೆಸರಾಗಿರುವ ಇಮ್ರಾನ್ ಹಷ್ಮಿ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ.ಈ ಕ್ಷೇತ್ರದಲ್ಲಿ ಸುದೀರ್ಘ ಕಾಲ ನೆಲೆ ಕಾಣ ಬೇಕಿರುವುದರಿಂದ ಇದು ಅನಿವಾರ್ಯವಾಗಿದೆ. ಆದರೆ ತೀರ ಚಿತ್ರ ನಿರ್ಮಾಪಕರಿಗೆ ಹೊರೆಯಾಗುವಷ್ಟು ಸಂಭಾವನೆಯನ್ನಂತೂ ಹೆಚ್ಚಿಸುವುದಿಲ್ಲ ಎಂಬುದನ್ನು ಖಾತರಿಪಡಿಸಿದ್ದಾರೆ.

ಈಗ ಸಂಭಾವನೆ ಎಷ್ಟಿದೆ, ಎಷ್ಟಕ್ಕೆ ಹೆಚ್ಚಿಸುತ್ತೀರಿ ಎಂಬ ಪ್ರಶ್ನೆಗೆ ಮಾತ್ರ ಉತ್ತರ ನೀಡದ ಹಷ್ಮಿ, ಇದೀಗ ಬದುಕಲು ಸಾಕಾಗುವಷ್ಟು ಸಂಭಾವನೆ ಇದೆ. ಉಳಿಸಲು ಬೇಕಾಗುವಷ್ಟು ಹೆಚ್ಚಿಸಲಿದ್ದೇನೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ. ಸಂಭಾವನೆಯನ್ನು ಇದ್ದಕ್ಕಿದ್ದಂತೆ ಹುಚ್ಚಾಪಟ್ಟೆ ಏರಿಸುವ ನಟರನ್ನೂ ನಾನು ನೋಡಿದ್ದೇನೆ.

ಅವರಿಂದ ಕಲಿತ ಪಾಠವೆಂದರೆ, ಸಿನಿಮಾರಂಗದಲ್ಲಿ ನೆಲೆಯೂರಬೇಕಾದರೆ ದರ ಏರಿಕೆಯನ್ನು ಕ್ರಮೇಣ ಮಾಡಬೇಕು ಎಂಬುದು. ದರ ಏರಿಕೆಯನ್ನು ಕೇವಲ ದಿನದ ಅಗತ್ಯಕ್ಕಾಗಿ ಮಾಡುತ್ತಿಲ್ಲ.
 
ಸ್ಟಾರ್ ವ್ಯಾಲ್ಯು ಹೆಚ್ಚಿಸುತ್ತಲೇ ಇಲ್ಲಿ ನೆಲೆಯೂರುವ ತಂತ್ರ ಇದು ಎಂದೆಲ್ಲ ಮ್ಯಾನೆಜ್‌ಮೆಂಟ್ ಬಗ್ಗೆ ಇಮ್ರಾನ್ ಮಾತನಾಡಿದ್ದಾರೆ. ದಿವಾಕರ್ ಬ್ಯಾನರ್ಜಿ ಅವರ `ಶಾಂಘೈ~ ಚಿತ್ರದ ಸಿದ್ಧತೆಯಲ್ಲಿ ಇಮ್ರಾನ್ ನಿರತರಾಗಿದ್ದಾರೆ. ಇದರಲ್ಲಿ ಅವರು ನೀಲಿ ಚಿತ್ರ ತೆಗೆಯುವ ನಿರ್ಮಾಪಕನ ಪಾತ್ರ ನಿರ್ವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.