ADVERTISEMENT

ಮೂರನೇ ಮಗು ವೈಯಕ್ತಿಕ ವಿಚಾರ: ಶಾರುಖ್ ಖಾನ್

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 19:59 IST
Last Updated 4 ಜುಲೈ 2013, 19:59 IST

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್  ಮತ್ತು ಪತ್ನಿ ಗೌರಿ ಬಾಡಿಗೆ ತಾಯಿಯ ಮೂಲಕ ಮೂರನೇ ಮಗು ಪಡೆದಿರುವ ಬಗ್ಗೆ ಮಾಧ್ಯಮಗಳು ಓತಪ್ರೋತವಾಗಿ ವರದಿ ಮಾಡಿದುವು.

ಬಾಡಿಗೆ ತಾಯಿ, ಗೌರಿಯ ಅತ್ತಿಗೆ ಎಂಬ ಬಗ್ಗೆಯೂ ಸುದ್ದಿಯಾಗಿತ್ತು. ಆದರೆ ಶಾರುಖ್ ಈ ಬಗ್ಗೆ ಮಾತಿಗೆ ಸಿಕ್ಕಿರಲಿಲ್ಲ. ಮೊನ್ನೆ ಚೆನ್ನೈ ಎಕ್ಸ್‌ಪ್ರೆಸ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಾಧ್ಯಮದ ಮಂದಿಯ ಪ್ರಶ್ನೆಗೆ ಉತ್ತರಿಸಿದ ಶಾರುಖ್ `ಇದು ತೀರಾ ವೈಯಕ್ತಿಕ ವಿಚಾರ.

ಈ ವಿಷಯ ಮಾತನಾಡಲು ಇದು ಸರಿಯಾದ ಸಮಯವಲ್ಲ. ಮುಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಇದೊಂದು ನೋವಿನ ಮತ್ತು ಸಂತೋಷದ ಮಿಶ್ರಣವಾಗಿದೆ. ನೋವಿನ ದಿನಗಳು ಮುಗಿದ ನಂತರ ಮಾತನಾಡುತ್ತೇನೆ' ಎಂದಿದ್ದಾರೆ.

ಆದರೆ, ನೋವಿನ ವಿಚಾರ ಯಾವುದೆಂದು ಶಾರುಖ್ ಬಿಡಿಸಿ ಹೇಳಿಲ್ಲ. ಆದರೆ ಈಗಾಗಲೇ ವರದಿಯಾಗಿರುವಂತೆ ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಅವರು ಚಿಂತಿತರಾಗಿದ್ದಾರೆ ಎಂಬುದು ಖಚಿತ.

ADVERTISEMENT

ಬಾಡಿಗೆ ತಾಯಿಯ ಮೂಲಕ ಜೂ.27ರಂದು ಮಗು ಜನಿಸಿತ್ತು. ಆದರೆ ಮಗು ಸಾಮಾನ್ಯಕ್ಕಿಂತ ಕಡಿಮೆ ತೂಕ ಇರುವ ಕಾರಣ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಬಗ್ಗೆಯೇ ಶಾರುಖ್ ವಿಚಲಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.