ನೃತ್ಯ ನಿರ್ದೇಶಕರಾಗಿ ಹೆಸರು ಮಾಡುತ್ತಲೇ ಉತ್ತಮ ಚಿತ್ರಗಳನ್ನು ಕೊಟ್ಟವರು ಎ. ಹರ್ಷ. ‘ಗೆಳೆಯ’, ’ಬಿರುಗಾಳಿ’, ‘ಭಜರಂಗಿ’, ‘ವಜ್ರಕಾಯ’ ಹಾಗೂ ‘ಮಾರುತಿ 800’ ಅವರು ನಿರ್ದೇಶನದ ಸಿನಿಮಾಗಳು. ‘ಮಾರುತಿ 800’ ನಂತರ ಹರ್ಷ ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲ ಗಾಂಧಿನಗರದಲ್ಲಿತ್ತು. ಈಗ ಅದಕ್ಕೆ ತೆರೆ ಬಿದ್ದಿದೆ.
ಯಶ್ ಮತ್ತು ಹರ್ಷ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಹೊಸ ಚಿತ್ರಕ್ಕೆ ‘ರಾಣಾ’ ಎಂಬ ಶೀರ್ಷಿಕೆ ಇಡಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಘೋಷಣೆಯಾಗಿದ್ದು, ಯಶ್ ಹುಟ್ಟದ ದಿನದಂದು ಚಿತ್ರದ ಮುಹೂರ್ತ ನೆರವೇರಲಿದೆಯಂತೆ.
ಈ ಹಿಂದೆ ‘ನಂದ ಲವ್ಸ್ ನಂದಿತ’, ‘ಭಾಗ್ಯದ ಬಳೆಗಾರ’ ಮತ್ತು ‘ಮರಿ ಟೈಗರ್’ ಸಿನಿಮಾಗಳನ್ನು ನಿರ್ಮಿಸಿದ್ದ ಸಿಂಹಾದ್ರಿ ಪ್ರೊಡಕ್ಷನ್ಸ್‌ನ ರಮೇಶ್ ಕಶ್ಯಪ್ ‘ರಾಣಾ' ಚಿತ್ರವನ್ನು ನಿರ್ಮಿಸಲಿದ್ದಾರೆ. ಹರ್ಷ ಅವರೇ ಕಥೆ, ಚಿತ್ರಕತೆ ಬರೆದು ನಿರ್ದೇಶಿಸುವ ಜತೆಗೆ, ನೃತ್ಯ ನಿರ್ದೇಶನವನ್ನೂ ಮಾಡಲಿದ್ದಾರೆ.
ಚಿತ್ರದಲ್ಲಿ ಆ್ಯಕ್ಷನ್ ಜತೆಗೆ, ಸೆಂಟಿಮೆಂಟ್ ಕೂಡ ಇರಲಿದೆ. ರಾಜ್ಯ ಸೇರಿದಂತೆ ವಿದೇಶದಲ್ಲೂ ಚಿತ್ರೀಕರಣ ನಡೆಸಲು ನಿರ್ದೇಶಕರು ಯೋಜನೆ ಹಾಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.