ADVERTISEMENT

ರಾ.ಒನ್ ಅಬ್ಬರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST
ರಾ.ಒನ್ ಅಬ್ಬರ
ರಾ.ಒನ್ ಅಬ್ಬರ   

ಶಾರುಖ್ ಖಾನ್ ನಿರ್ಮಿಸಿ, ನಟಿಸಿರುವ ಬಹುನಿರೀಕ್ಷಿತ `ರಾ.ಒನ್~ ಸಿನಿಮಾ ಅ.26 (ಬುಧವಾರ) ತೆರೆ ಕಂಡಿದೆ. ಮಗನ ಒತ್ತಾಸೆಗೆ ಮನಸೋತು ಸೂಪರ್ ಹೀರೋ ಪಾತ್ರ ಮಾಡಬೇಕೆಂದು ನಿಶ್ಚಯಿಸಿ ಈ ಸಿನಿಮಾವನ್ನು ತೆರೆಗೆ ತಂದಿದ್ದಾರೆ ಶಾರುಖ್.

ಸೈನ್ಸ್ ಫಿಕ್ಷನ್‌ನಂಥ ಕತೆಯುಳ್ಳ ಈ ಚಿತ್ರದಲ್ಲಿ ಶಾರುಖ್ ಅವರದು ದ್ವಿಪಾತ್ರ. ಗೇಮ್ ಡೆವೆಲಪರ್ ಮತ್ತು ಅಚ್ಚುಮೆಚ್ಚಿನ ತಂದೆಯದು ಒಂದು ಪಾತ್ರವಾದರೆ, ಸೂಪರ್ ಹೀರೋದು ಮತ್ತೊಂದು ಪಾತ್ರ. ಶಾರುಖ್‌ಗೆ ಜೋಡಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ. ಅರ್ಜುನ್ ರಾಂಪಾಲ್ ಖಳನಾಗಿ ಕಾಣಿಸಿಕೊಂಡಿದ್ದಾರೆ.
 
ಅವರೊಂದಿಗೆ ಅಮೆರಿಕದ ನಟ ಟಾಮ್ ವು, ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನೀಕಾಂತ್, ಸಂಜಯ್‌ದತ್, ಪ್ರಿಯಾಂಕಾ ಚೋಪ್ರಾ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಪೆಷಲ್ ಎಫೆಕ್ಟ್ ಮತ್ತು ಥ್ರೀಡಿ ಕನ್‌ವರ್ಷನ್ ತಂತ್ರಜ್ಞಾನ `ರಾ.ಒನ್~ನ ವಿಶೇಷಗಳು. ಇದಲ್ಲದೇ ಹಾಲಿವುಡ್ ಸಿನಿಮಾಗಳ ಮಟ್ಟಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರ ರೂಪಿಸಲಾಗಿದೆ.

ಚಿತ್ರದ ಒಟ್ಟು ಬಜೆಟ್ 175 ಕೋಟಿ ರೂಪಾಯಿ. ಭಾರತದಲ್ಲಿ ಬಿಡುಗಡೆಗೆ ಮುಂಚೆಯೇ ದುಬೈ, ಲಂಡನ್, ಟೊರೆಂಟೋದಲ್ಲಿ `ರಾ.ಒನ್~ ಪ್ರೀಮಿಯರ್ ಶೋ ನಡೆದಿದೆ. ಮೂರು ತಿಂಗಳಿಂದ ಚಿತ್ರತಂಡದೊಂದಿಗೆ ಊರೂರು ಸುತ್ತಿರುವ ಶಾರುಖ್, ಅಭೂತಪೂರ್ವ ಪ್ರಚಾರವನ್ನೂ ಮಾಡಿದ್ದಾರೆ.

ವಿಶ್ವದಾದ್ಯಂತ ಐದು ಸಾವಿರ ಸ್ಕ್ರೀನ್‌ಗಳಲ್ಲಿ 2ಡಿ ವರ್ಶನ್‌ನಲ್ಲಿ ಮತ್ತು 600 ಸ್ಕ್ರೀನ್ಸ್‌ಗಳಲ್ಲಿ ಥ್ರೀಡಿ ವರ್ಶನ್‌ಗಳಲ್ಲಿ ತೆರೆ ಕಾಣುತ್ತಿರುವ ದಾಖಲೆ ಈ ಚಿತ್ರದ್ದು. ಚಿತ್ರವನ್ನು ತಮಿಳು, ತೆಲುಗು ಮತ್ತು ಜರ್ಮನ್ ಭಾಷೆಗೆ ಡಬ್ ಮಾಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.