
ಪ್ರಜಾವಾಣಿ ವಾರ್ತೆಕರೀನಾ ಕಪೂರ್ ಮತ್ತು ಇಮ್ರಾನ್ ಹಶ್ಮಿ ರೊಮ್ಯಾಂಟಿಕ್ ಚಿತ್ರವೊಂದಕ್ಕೆ ಅಣಿಯಾಗುತ್ತಿದ್ದಾರೆ. ಈ ವರ್ಷದ ನಂತರ ತೆರೆಕಾಣಲಿರುವ ಈ ಚಿತ್ರದಲ್ಲಿ ಮೊದಲ ಬಾರಿ ಇಮ್ರಾನ್ ಮತ್ತು ಕರೀನಾ ಜೋಡಿಯಾಗಿ ಕಾಣಿಕೊಳ್ಳಲಿದ್ದಾರೆ.
ಏಕ್ತಾ ಕಪೂರ್‌ನ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಾಣದ, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಚಿತ್ರ ಇದಾಗಿದ್ದು, ಈಗಾಗಲೇ ಕರೀನಾ ಮತ್ತು ಇಮ್ರಾನ್ ನಾಮ ನಿರ್ದೇಶನ ಮಾಡಲಾಗಿದೆ. ಚಿತ್ರದಲ್ಲಿನ ಇನ್ನಿತರ ಪಾತ್ರಗಳಿಗೆ ಹುಡುಕಾಟ ನಡೆಯುತ್ತಿದೆ.
ಇಮ್ರಾನ್ ಮತ್ತು ಕರೀನಾ ನಟಿಸಲಿರುವ ಈ ಚಿತ್ರ ರೊಮ್ಯಾಂಟಿಕ್ ಮತ್ತು ನೈಜ ಚಿತ್ರ. ಇದರ ಚಿತ್ರೀಕರಣ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುಂಬೈ, ದೆಹಲಿಯಲ್ಲಿ ಶುರುವಾಗಲಿದೆ ಎಂದು ತಿಳಿದು ಬಂದಿದೆ. ಅಶೋಕ್ ರಾಯ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ `ಬತ್ತಮೀಜ್ ದಿಲ್' ಎಂದು ಹೆಸರಿಡುವ ಯೋಚನೆ ಇದೆಯಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.