ADVERTISEMENT

ವರದನಾಯಕನಿಗೆ ಬಿರುಸಿನ ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

`ವರದನಾಯಕ~ನಿಗೆ ಬಿರುಸಿನ ಚಿತ್ರೀಕರಣ 
 
ಶಂಕರ್ ನಿರ್ಮಿಸುತ್ತಿರುವ `ವರದನಾಯಕ~ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ಅಯ್ಯಪ್ಪ.ಪಿ.ಶರ್ಮ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಸುದೀಪ್ ಹಾಗೂ ಚಿರಂಜೀವಿ ಸರ್ಜಾ ನಟಿಸುತ್ತಿದ್ದಾರೆ. ನಿಖಿತಾ ಪಾಟೀಲ್, ಸಮೀರಾ ರೆಡ್ಡಿ, ಮುಖ್ಯಮಂತ್ರಿ ಚಂದ್ರು, ಜೈಜಗದೀಶ್, ಶೋಭ್‌ರಾಜ್, ಶರತ್ ಲೋಹಿತಾಶ್ವಾ, ಬುಲೆಟ್ ಪ್ರಕಾಶ್, ಶರಣ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಕೇಶ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಈಶ್ವರ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಚಿತ್ರಕ್ಕಿದೆ.

`ಕಾಲಾಯತಸ್ಮೈನಮಃ~ ಡಬ್ಬಿಂಗ್ ಪೂರ್ಣ

ಮಾರುತಿ ಜೆಡಿ ನಿರ್ಮಾಣದ `ಕಾಲಾಯ ತಸ್ಮೈ ನಮಃ~ ಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಡುಗಳು  ಹಾಗೂ ನಿರ್ದೇಶನ ಚಂದ್ರಶೇಖರ ಶ್ರಿ ವಾತ್ಸವ್ ಅವರದು. ಸಂಗೀತ-ಎ.ಎಂ.ನೀಲ್, ಛಾಯಾಗ್ರಹಣ  ಸಿನಿಟೆಕ್ ಸೂರಿ, ಸಂಕಲನ ಎಸ್.ಸೌಂದರ್ ರಾಜ್, ಸಾಹಸ ಡಿಫರೆಂಟ್ ಡ್ಯಾನಿ, ಕಲೆ ಶ್ರಿನಿವಾಸ್ ಅವರದು.

ತಾರಾಗಣದಲ್ಲಿ ಯೋಗೀಶ್, ಮದುಭಾಲಾ, ರಂಗಾಯಣ ರಘು, ರವಿಕಾಳೇ, ರಾಜು ತಾಳಿಕೋಟೆ, ಶಂಕರ್ ಅಶ್ವತ್ಥ್, ಪೆಟ್ರೋಲ್ ಪ್ರಸನ್ನ, ಜಯಸಿಂಹ ಮುಸುರಿ, ನಾಗರಾಜ್ ಮೂರ್ತಿ ಮುಂತಾದವರು ಅಭಿನಯಿಸುತ್ತಿದ್ದಾರೆ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.