ADVERTISEMENT

ವಿವೇಕನ ಮಾತು

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST

`ನನ್ನ ಸೆಟ್‌ನಲ್ಲಿ ತಂಬಾಕು ಸೇವನೆಯನ್ನು ಸಹಿಸುವುದೇ ಇಲ್ಲ. ಯಾರಾದರೂ ಸಿಗರೇಟು ಸೇದುತ್ತಿದ್ದರೆ, ನನಗೆ ಹೊಗೆ ಸೇವಿಸಲೂ ಆಗದು. ಆ ಕಾರಣಕ್ಕೆ ಸೆಟ್‌ನಿಂದ ಎದ್ದು ಹೊರಗೆ ಹೊರಟು ಬಿಡುತ್ತೇನೆ. ತಾಜಾ ಗಾಳಿ ಸೇವಿಸಲು~ ಎಂದು ಹೇಳಿರುವ ವಿವೇಕ್ ಒಬೆರಾಯ್ ಕ್ಯಾನ್ಸರ್ ರೋಗಿಗಳ ಸಹಾಯ ಸಂಸ್ಥೆಯೊಂದಿಗೆ 10 ವರ್ಷಗಳಿಂದ ಕೈಗೂಡಿಸಿದ್ದಾರೆ.

ಧೂಮಪಾನದಿಂದ ಹೊರ ಬರುವ ಹೊಗೆಯನ್ನೂ ಸೇವಿಸಬಾರದು. ಈ ಕಾರಣಕ್ಕೆ ಸಹ ಕಲಾವಿದರು ಸಿಗರೇಟು ಸೇವಿಸುತ್ತಿದ್ದರೆ, ಅವರ ವ್ಯಾನುಗಳತ್ತಲ್ಲೂ ವಿವೇಕ್ ಸುಳಿಯುವುದಿಲ್ಲವಂತೆ.

ಮೇ 31 ತಂಬಾಕು ರಹಿತ ದಿನ... ಇದಕ್ಕಾಗಿ ಜಾಗೃತಿ ಮೂಡಿಸಲು ವಿವೇಕ್ ಅವರ ತಾಯಿಯೊಂದಿಗೆ ಶ್ರಮಿಸುತ್ತಿದ್ದಾರೆ.

ADVERTISEMENT

`ನನ್ನಮ್ಮ ಯಾವತ್ತಿದ್ದರೂ ನನ್ನ ಪಾಲಿನ ಹೀರೊ. ಅವರು ಕ್ಯಾನ್ಸರ್ ಆಸ್ಪತ್ರೆಗೆ ಆಗಾಗ ಭೇಟಿ ನೀಡುತ್ತಾರೆ. ಮನೆಯೂಟವನ್ನು ರೋಗಿಗಳಿಗೆ ಉಣಬಡಿಸಿ, ಮಾತನಾಡಿಸಿ, ಅವರೊಂದಿಗೆ ಸ್ವಲ್ಪ ಹೊತ್ತು ಇದ್ದು ಬರುತ್ತಾರೆ~  ಎಂದು ವಿವೇಕ್ ಒಬೇರಾಯ್ ಅಮ್ಮನನ್ನು ಸ್ತುತಿಸುತ್ತಾರೆ.

ಇದು ಕೇವಲ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಅಷ್ಟೇ ಅಲ್ಲ. ಸಮಾಜದ ಹಿತಕ್ಕಾಗಿ ಯಾವುದೇ ಸಂಸ್ಥೆ ಸ್ವಾರ್ಥರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಅಂಥ ಸಂಸ್ಥೆಗಳೊಂದಿಗೆ ತಾವು ಕೈಜೋಡಿಸುವುದಾಗಿ 35ರ ಹರೆಯದ ವಿವೇಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.