ADVERTISEMENT

ಸಂಕ್ಷಿಪ್ತ ಸಿನಿಮಾ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಈ ವಾರ ತೆರೆಗೆ 

ಶ್ರೀ ಅಮರೇಶ್ವರ ಮಹಾತ್ಮೆ

ಅರವಿಂದ್ ಮುಲಗುಂದ ನಿರ್ದೇಶನದ `ಶ್ರೀ ಅಮರೇಶ್ವರ ಮಹಾತ್ಮೆ' ಚಿತ್ರದಲ್ಲಿ ಅಭಿಜಿತ್ ಅಮರೇಶ್ವರನ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ಟರ್ ಶ್ರಿನಿವಾಸ್ ಬಾಲ ಅಮರೇಶ್ವರನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಉಜ್ವಲಾ ಅಭಿನಯಿಸಿದ್ದಾರೆ. ದೊಡ್ಡಬಸಪ್ಪ ಕಾರ್ಯಕಾರಿ ನಿರ್ಮಾಪಕರು. ಮಹಾಬಲೇಶ್ವರ ಛಾಯಾಗ್ರಹಣ, ಎಂ. ಎಸ್. ಮಾರುತಿ ಸಂಗೀತ, ಮಹೇಶ್ ಮನ್ನಪುರ ಸಂಭಾಷಣೆ, ಶಿವು ಬೆರದಾಗಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ರಮೇಶ್ ದೇಸಾಯಿ ಕಲಾ ನಿರ್ದೇಶನ, ಅಲಗುರು ವೆಂಕಟೇಶ್ ಹಾಗೂ ಪ್ರಭು ಗಂಜಿಯಾಲ ಸಹ ನಿರ್ದೇಶನ ಚಿತ್ರಕ್ಕಿದೆ.

ADVERTISEMENT

ಬೆಳಕಿನೆಡೆಗೆ

ಜೆ.ರಮೇಶ್‌ಕುಮಾರ್ ಜೈನ್ ನಿರ್ಮಾಣ ಮಾಡಿರುವ `ಬೆಳಕಿನೆಡೆಗೆ' ಚಿತ್ರದಲ್ಲಿ ಕರಿಬಸವಯ್ಯ, ರಾಮಕೃಷ್ಣ, ಗುರುರಾಜ ಹೊಸಕೋಟೆ, ಕಾಶಿ, ಮೋಹನ್ ಜುನೇಜಾ, ಚಂಪಾ ಶೆಟ್ಟಿ, ಸುಚಿತ್ರಾ, ಮಾ.ಚಿರಂಜೀವಿ, ಮಾ. ಮಂಜುನಾಥ್, ಮಾ.ಶ್ಯಾಂ, ಮಾ.ಅರ್ಜುನ್, ಬೇಬಿ ಸಾನಿಯಾ ಅಯ್ಯರ್ ಮುಂತಾದವರು  ತಾರಾಬಳಗದಲ್ಲಿದ್ದಾರೆ.

ಅಜಯ್‌ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪ್ರಧಾನ ನಿರ್ದೇಶಕರು ಜೆ.ರಮೇಶ್‌ಕುಮಾರ್ ಜೈನ್. ಕುಮಾರ್‌ಈಶ್ವರ್ ಸಂಗೀತ, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಶ್ರಿ ಸಂಕಲನ, ರೇವಣ್ಣ ಕಲಾ ನಿರ್ದೇಶನ ಹಾಗೂ ಸದಾ ರಾಘವ್- ಸಂತೋಷ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

`ಅಜಿತ್'ಗೆ 3 ಹಾಡು ಬಾಕಿ

ಜಿ.ಪ್ರೇಮ್ ನಿರ್ಮಿಸುತ್ತಿರುವ `ಅಜಿತ್' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಚಿರಂಜೀವಿ  ಸರ್ಜಾ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಮಹೇಶ್‌ಬಾಬು ನಿರ್ದೇಶಿಸುತ್ತಿದ್ದಾರೆ. ನಿಕ್ಕಿ, ಹರ್ಪಿತ್, ಆರ್.ವಿ.ಚೌಧರಿ, ಜಾಫರ್, ರಾಕ್‌ಲೈನ್ ಸುಧಾಕರ್, ಶಿವಮಂಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

`ಉಮೇಶ್ ರೆಡ್ಡಿ'ಗೆ 2ನೇ ಹಂತ  

ಆದಿತ್ಯ ರಮೇಶ್ ನಿರ್ಮಿಸುತ್ತಿರುವ `ಉಮೇಶ್ ರೆಡ್ಡಿ` ಚಿತ್ರಕ್ಕೆ ಎರಡು ದಿನಗಳ ಚಿತ್ರೀಕರಣ ನಡೆದಿದೆ. ಏ.17ರಿಂದ ದ್ವಿತೀಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಮಳವಳ್ಳಿ ಸಾಯಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಾಧುಕೋಕಿಲ ಸಂಗೀತ ನೀಡಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ರವಿವರ್ಮ ಸಾಹಸ, ಈಶ್ವರಿಕುಮಾರ್ ಕಲಾನಿರ್ದೇಶನವಿದೆ.

************************************************************

ಭೂತಬಂಗಲೆಯಲ್ಲಿ `ಭೈರವಿ'
ವಿಜಯ್ ಸುರಾನ ನಿರ್ಮಿಸುತ್ತಿರುವ `ಭೈರವಿ' ಚಿತ್ರದ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ತಾವರೆಕೆರೆಯ ಭೂತಬಂಗಲೆಯಲ್ಲಿ ನಡೆಯಿತು. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ ಈ ಸಾಹಸ ಸನ್ನಿವೇಶದಲ್ಲಿ ನಾಯಕಿ ಆಯೇಷಾ ಹಾಗೂ 15 ಜನ ಸಾಹಸ ಕಲಾವಿದರು ಭಾಗವಹಿಸಿದ್ದರು. ಹ.ಸೂ.ರಾಜಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಮೇಶ್‌ಭಟ್, ಸುಚೇಂದ್ರಪ್ರಸಾದ್, ಮೈಕೋ ನಾಗರಾಜ್, ನೀನಾಸಂ ಅಶ್ವತ್ಥ್, ಎಂ.ಎಸ್.ಉಮೇಶ್, ಮೈಕೋ ಶಿವು, ಹಂಸ, ಸಂಗೀತ ಮುಂತಾದವರಿದ್ದಾರೆ.

ವೀರಸಮರ್ಥ್ ಸಂಗೀತ ನಿರ್ದೇಶನ, ಗೌರಿವೆಂಕಟೇಶ್ ಛಾಯಾಗ್ರಹಣ, ಕೆ.ಡಿ.ವೆಂಕಟೇಶ್ ಸಾಹಸ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನ, ಶೇಷಗಿರಿ ಸಂಭಾಷಣೆ ಬರೆದಿದ್ದಾರೆ.

ಮದರಂಗಿ ರಂಗು
ಯೂಟ್ಯೂಬ್‌ನಲ್ಲಿ ಒಂದೂಮುಕ್ಕಾಲು ಲಕ್ಷ ಹಿಟ್‌ಗಳು. ವೆಬ್‌ಸೈಟ್‌ನಲ್ಲಿ ಎರಡು ಲಕ್ಷ ಹಿಟ್‌ಗಳು. ಬಿಡುಗಡೆಗೂ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ `ಹಿಟ್' ಆಗುತ್ತಿರುವ ಚಿತ್ರ `ಮದರಂಗಿ'.

ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಕೃಷ್ಣ ಚಿತ್ರದ ನಾಯಕ, `ಕೃಷ್ಣ ರುಕ್ಮಣಿ' ಧಾರಾವಾಹಿಯಲ್ಲಿ ಈಗಾಗಲೇ ಕ್ಯಾಮೆರಾ ಎದುರಿಸಿದ ಅನುಭವ ಅವರಿಗೆ ಇದೆ. ಕತೆ ನಿರ್ದೇಶನ ಮಲ್ಲಿಕಾರ್ಜುನ್ ಅವರದು. ಈ ಹಿಂದೆ `ಆಟೋ'ಕ್ಕೆ ಅವರು ಆ್ಯಕ್ಷನ್ ಕಟ್ ಹೇಳಿದ್ದರು. ನಾಯಕಿಯಾಗಿ ಸುಷ್ಮಾರಾಜ್ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದಹಾಗೆ ಹಿಟ್ ಹಾಡುಗಳನ್ನು ನೀಡಿ ರಸಿಕರ ಮನ ಸೆಳೆದಿರುವುದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್. ಅರಸು ಅಂತಾರೆ ಸಾಹಿತ್ಯ, ಗಿರೀಶ್ ಛಾಯಾಗ್ರಹಣ ಚಿತ್ರಕ್ಕುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.