`ಪ್ರೇಮ ಒಕ ಮೈಕಂ~ ಚಿತ್ರ ವೇಶ್ಯೆಯೊಬ್ಬಳ ಪ್ರೇಮ ಕಥೆಯನ್ನು ಆಧರಿಸಿದ್ದು ಎನ್ನುತ್ತಿದ್ದಾರೆ ತೆಲುಗು ಚಿತ್ರ ನಿರ್ದೇಶಕ ಚಂದ್ರು. ವೇಶ್ಯಾವಾಟಿಕೆ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಚಿತ್ರಗಳು ಈಗಾಗಲೇ ಸಾಕಷ್ಟು ಬಂದಿವೆ.
ಹಾಗಾಗಿ ನಾವು ಈ ಚಿತ್ರದಲ್ಲಿ ಮತ್ತೆ ಕಾಮವನ್ನು ವಿಜೃಂಭಿಸುವ ಕೆಲಸ ಮಾಡುವುದಿಲ್ಲ. ಕಾಲನ ಕೈಗೆ ಸಿಕ್ಕಿ ಈ ವೃತ್ತಿಗೆ ಒತ್ತಾಯಪೂರ್ವಕವಾಗಿ ತಳ್ಳಲಾದ ಹುಡುಗಿಯೊಬ್ಬಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿರುವ ಪ್ರೀತಿಯನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ ನಿರ್ದೇಶಕರು.
ತೆಲುಗು ಚಿತ್ರರಂಗದ ಜನಪ್ರಿಯ ನಟಿ ಚಾರ್ಮಿ ಕೌರ್ ಈ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ರಾಹುಲ್ ಮತ್ತು ಶರಣ್ಯ ಮುಖ್ಯ ಪಾತ್ರದಲ್ಲಿದ್ದಾರೆ.
ಡಿ.ವೆಂಕಟ್ ಸುರೇಶ್ ಮತ್ತು ಕೆ.ಸೂರ್ಯ ಶ್ರೀಕಾಂತ್ ಚಿತ್ರದ ನಿರ್ಮಾಪಕರು. ವಿವೇಕ್ ಸಾಗರ್ ಚಿತ್ರಕ್ಕೆ ಸಂಗೀತದ ಮಟ್ಟುಗಳನ್ನು ಹಾಕಿದ್ದರೆ, ಪ್ರವೀಣ್ ಬಂಗಾರಿ ಸಿನಿಮಾಟೋಗ್ರಫಿಯಲ್ಲಿ ತಮ್ಮ ಚಮತ್ಕಾರ ತೋರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.