ADVERTISEMENT

ಸಿಡಿಲ ಮರಿಗೆ ‘ಎ’ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಹಬೀಬ್ ನಿರ್ಮಾಣದ ‘ಸಿಡಿಲು ಮರಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರದ ನಿರ್ದೇಶಕ ರಘುರಾಜ್. ಬಿ.ಎ. ಮಧು ಸಂಭಾಷಣೆ, ಜನಾರ್ದನ್ ಛಾಯಾಗ್ರಹಣ, ಎಂ.ಎನ್. ಕೃಪಾಕರ್ ಸಂಗೀತ, ಗೋವರ್ಧನ್ ಸಂಕಲನ ಚಿತ್ರಕ್ಕಿದೆ.

ತಾರಾಗಣದಲ್ಲಿ ಆಯೆಷಾ, ಜೈ ಜಗದೀಶ್, ಶರತ್ ಲೋಹಿತಾಶ್ವ, ಸತ್ಯಜಿತ್,  ಶಿಲ್ಪಾ, ಪೆಟ್ರೋಲ್ ಪ್ರಸನ್ನ  ಜಯಲಕ್ಷ್ಮಿ ಪಾಟೀಲ್, ಸಿದ್ದರಾಜು ಕಲ್ಯಾಣ್‌ಕರ್, ಮೈಸೂರು ಮಂಜುಳಾ ಇತರರು ಇದ್ದಾರೆ.

ಬದಲಾದ ‘ಉಮೇಶ್ ರೆಡ್ಡಿ’   
ಆದಿತ್ಯ ರಮೇಶ್ ನಿರ್ಮಿಸುತ್ತಿರುವ ‘ಉಮೇಶ್ ರೆಡ್ಡಿ ಚಿತ್ರದ ಶೀರ್ಷಿಕೆಯನ್ನು ‘ಖತರ್ನಾಕ್’ ಎಂದು ಬದಲಿಸಲಾಗಿದೆ. ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ. ಮಳವಳ್ಳಿ ಸಾಯಿಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಾಧುಕೋಕಿಲ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಂ.ಆರ್. ಸೀನು ಛಾಯಾಗ್ರಹಣ, ಈಶ್ವರಿಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. ರವಿಕಾಳೆ, ರವಿವರ್ಮ, ರೂಪಿಕಾ, ಸಾಧುಕೋಕಿಲ, ಬುಲ್ಲೆಟ್ ಪ್ರಕಾಶ್, ಮುರಳಿಮೋಹನ್, ತುಮಕೂರು ಮೋಹನ್,  ಶೋಭಿನಾ ಇತರರು ತಾರಾಬಳಗದಲ್ಲಿ ಇದ್ದಾರೆ.

‘ಸ್ಮಗ್ಲರ್’ ಸಾಂಗ್
ಗೌರಮ್ಮ ಹಾಗೂ ಪ್ರಿಯಾಹಾಸನ್ ನಿರ್ಮಿಸುತ್ತಿರುವ ‘ಸ್ಮಗ್ಲರ್’ ಚಿತ್ರದ ಮಾತಿನಭಾಗದ ಚಿತ್ರೀಕರಣ ಪೂರ್ಣವಾಗಿದ್ದು, ಹಾಡಿನ ಚಿತ್ರೀಕರಣ ಬಾಕಿಯಿದೆ. ಬೆಂಗಳೂರು, ಕುಶಾಲನಗರ ಮತ್ತಿತರ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಇತ್ತೀಚೆಗೆ ಚಿತ್ರ ಶೀರ್ಷಿಕೆ ಗೀತೆ ‘ಟ್ರೈನ್ ಬುಲೆಟ್‌ಗಿಂತ ವೇಗ’ ಹಾಡನ್ನು ಸಂಗೀತ ನಿರ್ದೇಶಕ ಅರ್ಜುನ್‌ಜನ್ಯ ಹಾಡಿದರು. ಪ್ರಿಯಾಹಾಸನ್ ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕ ರಮಣ. ಶಯ್ಯಾಜಿಶಿಂಧೆ, ಹ್ಯಾರಿ, ರಮೇಶ್‌ಭಟ್ ಇತರರು ಚಿತ್ರದ ತಾರಾಗಣ. ಕೆ. ವೀರು ಈ ಚಿತ್ರದ ನಿರ್ದೇಶಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT