ADVERTISEMENT

ಸೋನಾಕ್ಷಿಗೆ ಹೊಸ ಗೆಟಪ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2013, 19:59 IST
Last Updated 10 ಜನವರಿ 2013, 19:59 IST
ಸೋನಾಕ್ಷಿಗೆ ಹೊಸ ಗೆಟಪ್
ಸೋನಾಕ್ಷಿಗೆ ಹೊಸ ಗೆಟಪ್   

ಎಂಬತ್ತರ ದಶಕದ ಚೆಲುವನ್ನು ಮೈಮೇಲೆ ಆವಾಹಿಸಿಕೊಂಡಂತೆ ಸಿಂಗರಿಸಿಕೊಂಡಿದ್ದರು ಸೋನಾಕ್ಷಿ ಸಿನ್ಹಾ. ಅದು `ಹಿಮ್ಮತ್‌ವಾಲಾ' ಚಿತ್ರದ ಸೆಟ್. ನಿರ್ದೇಶಕ ಸಾಜಿದ್ ಖಾನ್, ಸೋನಾಕ್ಷಿಯನ್ನು ಕಷ್ಟಪಟ್ಟು ಒಪ್ಪಿಸಿ ಐಟಂ ಹಾಡಿಗೆ ಸಿದ್ಧಗೊಳಿಸಿದ್ದರು.

`ಥ್ಯಾಂಕ್ ಗಾಡ್ ಇಟ್ಸ್ ಫ್ರೈಡೇ...' ಎಂದು ಆರಂಭವಾಗುವ ಈ ಹಾಡಿಗೆ ಚಿನ್ನಿ ಪ್ರಕಾಶ್ ನೃತ್ಯ ನಿರ್ದೇಶಿಸುತ್ತಿದ್ದಾರೆ. `ನೂರು ನರ್ತಕರ ಜತೆ ಕುಣಿಯಬೇಕಿರುವುದರಿಂದ ನಾನು ಸಮಯ ತೆಗೆದುಕೊಂಡು ತಾಲೀಮು ನಡೆಸಿದೆ. ಇದು ವಿಚಿತ್ರ ಹಾವಭಾವ ಇರುವ ಹಾಡು. 80ರ ದಶಕದ ನಟಿ ಪರ್ವೀನ್ ಬಾಬಿ ನರ್ತನ ಶೈ ಲಿಯ ಸ್ಫೂರ್ತಿಯಿಂದ ನರ್ತಿಸುತ್ತಿರುವೆ' ಎಂದು ಸೋನಾಕ್ಷಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.