ADVERTISEMENT

ಹಕ್ಕ-ಬುಕ್ಕನಿಗೆ ಐಟಂ ಹಾಡು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಸಂತೋಷ್ ಬಂಡಾರಿ ಹಾಗೂ ಎಚ್.ಎಂ.ಕೃಷ್ಣ ನಿರ್ಮಿಸುತ್ತಿರುವ `ಹಕ್ಕ-ಬುಕ್ಕ~ ಚಿತ್ರಕ್ಕೆ `ಕುಣಿಸಿದೆ ಕುಣಿಸಿದೆ ರಮ್ ದಮ್ ಕುಣಿಸಿದೆ.. ನಶೆಯಿದೆ ನಶೆಯಿದೆ ಮೈಯೆಲ್ಲಾ ನಶೆಯಿದೆ..~ ಎಂಬ ಐಟಂ ಹಾಡನ್ನು ಕಂಬಿ ರಾಜು ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಲಾಯಿತು.

ಇದರೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಯು.ಕೆ.ದಾಸ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರವಿಶಂಕರ್, ತಬಲಾನಾಣಿ, ರಾಧಿಕಾ ಗಾಂಧಿ, ಸತ್ಯಜಿತ್, ಅರವಿಂದ್, ಹೊನ್ನವಳ್ಳಿ ಕೃಷ್ಣ, ಜಯಶೀಲಾ, ಮೋಹನ ಜುನೇಜ ಅಭಿನಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.