ಬಾಲಿವುಡ್‌ನ ಅಪ್ರತಿಮ ಸಂಗೀತ ನಿರ್ದೇಶಕ ಇಳಯರಾಜ ಅವರ ಮಗ ಯುವಾನ್‌ಗೆ ಅಪ್ಪನಂತೆ ಬಾಲಿವುಡ್‌ನಲ್ಲೇ ಹೆಸರು ಮಾಡುವಾಸೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಎ.ಆರ್. ರೆಹಮಾನ್‌ಗೆ ಸಾಟಿಯಾಗಿ ಗುರುತಿಸಿಕೊಂಡಿರುವ ಯುವಾನ್‌ಗೆ ಇಮ್ರಾನ್ ಹಶ್ಮಿಯ ಮುಂದಿನ ಚಿತ್ರದಲ್ಲಿ ಸಂಗೀತ ನಿರ್ದೇಶಿಸುವ ಅವಕಾಶ ಸಿಕ್ಕಿರುವ ಸುದ್ದಿ ಬಿ ಟೌನ್‌ನಿಂದ ಬಂದಿದೆ.
`ಸಾರ್ವಕಾಲಿಕ ನೆನಪಾಗಿ ಉಳಿಯಬಲ್ಲಂತಹ ಸಂಗೀತವನ್ನು ನೀಡಬಲ್ಲ ಸಂಗೀತ ಪ್ರತಿಭೆ ಯುವಾನ್. ಎ.ಆರ್. ರೆಹಮಾನ್‌ರನ್ನು ಹೋಲುವ ಯುವಾನ್, ರೆಹಮಾನ್ ಅವರಂತೆಯೇ ತಮಿಳುನಲ್ಲಿ ಯಶಸ್ವಿಯಾಗಿ ಇತರ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಾ, ಬಾಲಿವುಡ್ ಮತ್ತು ಹಾಲಿವುಡ್‌ಗೆ ಪ್ರವೇಶ ಪಡೆದಂತೆ ಯುವಾನ್ ಸಹ ತಮ್ಮ ಸಂಗೀತ ಯಾನವನ್ನು ಕೈಗೊಳ್ಳುವ ಸಾಧ್ಯತೆ ಸ್ಪಷ್ಟವಾಗಿದೆ' ಎಂದು ಡಿಸ್ನಿ ಯುಟಿವಿಯ ಕ್ರಿಯೇಟಿವ್ ಡೈರೆಕ್ಟರ್ ಮನೀಷ್ ಹರಿಪ್ರಸಾದ್ ಮುಕ್ತಕಂಠದಿಂದ ಹೊಗಳಿದ್ದಾರೆ.
ಡಿಸ್ನಿ ಯುಟಿವಿಯ ಸ್ಟುಡಿಯೋ ಮೂಲಕ ಯುವಾನ್ ಅವರ ಬಾಲಿವುಡ್ ಯಾನ ಆರಂಭವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದಿರುವ ಮನೀಷ್, ಹಿಂದಿಯಲ್ಲಿ ಉತ್ತಮ ಚಿತ್ರವೊಂದನ್ನು ಯುವಾನ್ ಎದುರುನೋಡುತ್ತಿದ್ದರು. ಅವರ ಕನಸು ನನಸಾಗುವಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.