ಜಿ. ಶಿವಕುಮಾರ್ ನಿರ್ಮಾಣದ `ಹಾಫ್ ಮೆಂಟ್ಲು' ಚಿತ್ರದ ಚಿತ್ರೀಕರಣ ಬೆಂಗಳೂರಿನ ನಂದಿನಿ ಬಡಾವಣೆಯ ಸುತ್ತಮುತ್ತ ನಡೆಯುತ್ತಿದೆ. ನಿರ್ದೇಶಕ ಲಕ್ಷ್ಮೀ ದಿನೇಶ್, ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಬರೆದಿದ್ದಾರೆ. ಪಿ.ಎಲ್. ರವಿ ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ, ಸಚಿನ್ ಸಂಕಲನ, ಮಾಸ್ ಮಾದ ಸಾಹಸ ಚಿತ್ರಕ್ಕಿದೆ. ಸಂದೀಪ್, ಸೋನು, ಮೈಕೋ ನಾಗರಾಜ್, ಲಕ್ಷ್ಮೀದೇವಮ್ಮ, ತಬಲ ನಾಣಿ, ಶ್ರೀನಿವಾಸ್ ಗೌಡ, ಮೋಹನ್ ಜುನೇಜಾ, ಉಂಡಾಡಿ ಗುಂಡ ಹರಿ ಮತ್ತಿತರರು ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.