ADVERTISEMENT

‘ಚಿತ್ರ ತಡೆದರೆ ನಟರಿಗೆ ತೊಂದರೆ’

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 19:59 IST
Last Updated 13 ಸೆಪ್ಟೆಂಬರ್ 2013, 19:59 IST

‘ಒಮ್ಮೆ ಸೆನ್ಸಾರ್‌ ಮಂಡಳಿಯಿಂದ  ಓಕೆಯಾಗಿರುವ ಚಲನಚಿತ್ರಗಳನ್ನು ನಿರ್ಬಂಧಿಸುವುದು ಅಥವಾ ಬಿಡುಗಡೆಗೆ ತಡೆ ಹೇರುವುದರಿಂದ ಚಿತ್ರದ ನಿರ್ಮಾಪಕರಿಗೆ ಮತ್ತು ನಟರಿಗೆ ತೊಂದರೆಯಾಗುತ್ತದೆ’ ಎಂದು ನಟ ವಿವೇಕ್‌ ಒಬೆರಾಯ್‌ ಹೇಳಿದ್ದಾರೆ.

ವಯಸ್ಕರ ಕಾಮೆಡಿ ಚಿತ್ರ ‘ಗ್ರ್ಯಾಂಡ್‌ ಮಸ್ತಿ’ಗೆ ಹರಿಯಾಣ ಮತ್ತು ಪಂಜಾಬ್‌ ಹೈಕೋರ್ಟ್‌ ತಡೆ ಹೇರಿರುವುದನ್ನು ಉಲ್ಲೇಖಿಸಿ ಒಬೆರಾಯ್‌ ಹೀಗೆ ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರವನ್ನು ಸೆ.13ರಂದು ಬಿಡುಗಡೆಗೆ ಮಾಡಲು ಸಿದ್ಧತೆ ನಡೆಸಲಾಗಿತ್ತು.

‘ಒಮ್ಮೆ ಸೆನ್ಸಾರ್‌ ಬೋರ್ಡ್‌ ಯಾವುದೇ ತಕರಾರು ಇಲ್ಲದೆ ಒಪ್ಪಿಗೆ ನೀಡಿದ ಮೇಲೆ ಬಿಡುಗಡೆಗೆ ಯಾವುದೇ ತಡೆ ಇಲ್ಲ’ ಎಂದು ವಿವೇಕ್‌ ಹೇಳಿದ್ದಾರೆ. ‘ದೊಡ್ಡಮಟ್ಟದ ಹಣ ಹಾಕಿ ಚಿತ್ರ ನಿರ್ಮಾಣ ಮಾಡಿದ ನಂತರ ಬಿಡುಗಡೆಯ ಕ್ಷಣದಲ್ಲಿ ತಡೆ ಹೇರಿದರೆ ತೊಂದರೆಯಾಗುತ್ತದೆ ಎಂದಿದ್ದಾರೆ.

ಇಂದ್ರಕುಮಾರ್‌ ನಿರ್ದೇಶನದ ಗ್ರ್ಯಾಂಡ್‌ ಮಸ್ತಿ ಚಿತ್ರದಲ್ಲಿ ರಿತೇಶ್ ದೇಶ್‌ಮುಖ್‌, ಅಫ್ತಾಬ್‌ ಶಿವ್‌ದಸಾನಿ ಕೂಡಾ ನಟಿಸಿದ್ದಾರೆ. ‘ಈ ಚಿತ್ರದಲ್ಲಿ ಅಶ್ಲೀಲ ಸಂಭಾಷಣೆ ಇದೆ. ಮಹಿಳೆಯರನ್ನು ಕೀಳಾಗಿ ತೋರಿಸಲಾಗಿದೆ. ಹಾಗಾಗಿ ಚಿತ್ರದ ಬಿಡುಗಡೆಗೆ ತಡೆ ನೀಡಬೇಕು’ ಎಂದು ಎಂದು ವಕೀಲರೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.