‘ಸಚಿನ್...’ ಪ್ರಥಮ ಹಂತ ಪೂರ್ಣ
ಬಿ.ಎನ್. ಗಂಗಾಧರ್ ನಿರ್ಮಿಸುತ್ತಿರುವ ‘ಸಚಿನ್... ತೆಂಡೂಲ್ಕರ್ ಅಲ್ಲ’ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಭಾಗದಲ್ಲಿ ಒಟ್ಟು ಹದಿನೇಳು ದಿನ ಚಿತ್ರೀಕರಣ ನಡೆಸಲಾಗಿದೆ. ಈ ತಿಂಗಳ ಇಪ್ಪತ್ತರಿಂದ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.
ಎಸ್. ಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಪ್ರಸಾದ್‌ಬಾಬು ಛಾಯಾಗ್ರಹಣವಿದೆ. ಶಿವು ಸಂಕಲನ, ರಾಜೇಶ್‌ರಾಮನಾಥ್ ಸಂಗೀತ ನೀಡಿದ್ದಾರೆ. ಸುಹಾಸಿನಿ, ಸುಧಾರಾಣಿ, ಪದ್ಮಾ ವಾಸಂತಿ, ಮಾಸ್ಟರ್ ಸ್ನೇಹಿತ್, ಶೈಲಜಾ ಜೋಶಿ, ಶ್ರೀನಿವಾಸ್ ಪ್ರಭು, ಕ್ರಿಕೆಟಿಗ ವೆಂಕಟೇಶ್‌ಪ್ರಸಾದ್ ಇತರರು ಅಭಿನಯಿಸುತ್ತಿದ್ದಾರೆ.
ಕಳಸಾದಲ್ಲಿ ‘ಈ ದಿಲ್...’
ಎಸ್. ಶ್ರೀಧರ್ ನಿರ್ಮಾಣದ ‘ಈ ದಿಲ್ ಹೇಳಿದೆ ನೀ ಬೇಕಂತ’ ಚಿತ್ರತಂಡ ಚಿಕ್ಕಮಗಳೂರು ಜಿಲ್ಲೆಯ ಕಳಸ, ಹೊರನಾಡು ಮತ್ತು ಕೆಳಗೂರು ಎಸ್ಟೇಟ್‌ನಲ್ಲಿ ಚಿತ್ರೀಕರಣ ನಡೆಸುತ್ತಿದೆ. ‘ಸಾವಿರ ಜನುಮ ಜೊತೆ ಇರುವೆ’ ಎಂಬ ಗೀತೆಯನ್ನು ಚಿತ್ರೀಕರಿಸಲಾಯಿತು. ಹಾಡಿನ ಸನ್ನಿವೇಶನಕ್ಕೆ ಅವಿನಾಶ್ ನರಸಿಂಹರಾಜು, ಶ್ರೀಶ್ರುತಿ ಹೆಜ್ಜೆಯಾಕಿದರು.
ಕೆ.ಟಿ.ಎಂ. ಶ್ರೀನಿವಾಸ್ ಚಿತ್ರದ ನಿರ್ದೇಶಕರು. ಎಚ್.ಕೆ. ಚಿದಾನಂದ್ ಛಾಯಾಗ್ರಹಣ, ಸತೀಶ್ ಆರ್ಯನ್ ಸಂಗೀತ, ಗಣೇಶನ್ ಸಂಕಲನ ಚಿತ್ರಕ್ಕಿದೆ. ಗೋಪಿ, ಸುರೇಶ್ ಮಂಗಳೂರು, ನಾಗೇಂದ್ರ ಶಾ, ವಿದ್ಯಾಮೂರ್ತಿ, ಕುಮುದಾ ಇತರರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರೀಕರಣದಲ್ಲಿ ‘ಪ್ರೇಮಾರ್ಪಣೆ’
ಕೆ. ಕೃಷ್ಣಾರೆಡ್ಡಿ ನಿರ್ಮಾಣದ ಪ್ರೇಮಾರ್ಪಣೆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಥ್ರಿಲ್ಲರ್ ಮಂಜು, ಲಯೇಂದ್ರ ಮತ್ತಿತರ ಹಾಸ್ಯ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಈಗಾಗಲೇ ಬೆಂಗಳೂರು ಮಡಿಕೇರಿ, ಗೋಣಿಕೊಪ್ಪ ವೀರಾಜ್‌ಪೇಟೆ, ಸುಳ್ಯ, ಮಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಾಗಾರ್ಜುನ, ಸಂಜನಾ ನಾಯ್ಡು, ರಮೇಶ್ ಭಟ್, ಅಪೂರ್ವ, ಥ್ರಿಲ್ಲರ್ ಮಂಜು, ಮಿತ್ರ ಇತರರು ಅಭಿನಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.