ADVERTISEMENT

‘ಸೂರಿ ಗ್ಯಾಂಗ್’ಗೆ ‘ಎ’ ಸರ್ಟಿಫಿಕೆಟ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ಬಿ.ವೆಂಕಟೇಶ್  ಮತ್ತು ಲಾಲಿ ಸ್ವಾಮಿ ಕೆ. ನಿರ್ಮಾಣದ ‘ಸೂರಿ ಗ್ಯಾಂಗ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಚಿತ್ರ ಇದೇ ತಿಂಗಳು ತೆರೆಕಾಣಲಿದೆ.

ಕೆ. ಅನ್ಬು ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕುಮಾರ್ ಚಕ್ರವರ್ತಿ ಛಾಯಾಗ್ರಹಣ, ಎಸ್. ನಾಗು ಸಂಗೀತ,  ಮದನ್-ಹರಿಣಿ, ಚಿ.ಶಾಸ್ತ್ರಿ (ಮಾಲೂರು) ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿಫರೆಂಟ್ ಡ್ಯಾನಿ ಮತ್ತು ಜೋನ್ಸ್  ಸಾಹಸ ನಿರ್ದೇಶನ, ಹರೀಶ್ ಜಿ.ಎಸ್. ರಾಡ್ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

ರಾಮ್, ಛಾಯಾಸಿಂಗ್, ಮೈಕೋ ನಾಗರಾಜ್, ರಮೇಶ್ ಭಟ್, ಬಿರಾದಾರ್, ಪದ್ಮಜಾ ರಾವ್, ಮಂಡ್ಯ ಜಗ್ಗಿ, ಹನುಮೇಶ್, ಹರ್ಷವರ್ಧನ್ ರೆಡ್ಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.