ADVERTISEMENT

‘ಸೋದರನ ಮದುವೆ... ನಾನೂ ಬರುವೆ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST
‘ಸೋದರನ ಮದುವೆ...  ನಾನೂ ಬರುವೆ’
‘ಸೋದರನ ಮದುವೆ... ನಾನೂ ಬರುವೆ’   

ನಟಿ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ ಸೌರಭ್ ಮದುವೆ ದೆಹಲಿಯಲ್ಲಿ ನಡೆಯುತ್ತಿದೆ. ಆದರೆ ಪ್ರಿಯಾಂಕಾ ಅವರಿಗೆ ಮಾತ್ರ ಈವರೆಗೂ ಮದುವೆಗೆ ಹೋಗಲು ಸಾಧ್ಯವಾಗಿಲ್ಲವಂತೆ. ಈ ಬಗ್ಗೆ ತುಂಬಾ ಬೇಜಾರಿದೆ ಎಂದು ಟ್ವೀಟ್ ಮಾಡಿದ್ದಾರೆ ಪ್ರಿಯಾಂಕಾ.

ಸದ್ಯಕ್ಕೆ ‘ಮೇರಿ ಕೋಮ್’ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಪ್ರಿಯಾಂಕಾ ಚೋಪ್ರಾಗೆ ಮದುವೆಗೆ ಹೋಗಲು ಸಾಧ್ಯವಾಗಿಲ್ಲ. ಚಿತ್ರೀಕರಣದ ನಡುವೆ ಬಿಡುವು ಮಾಡಿಕೊಂಡು ಮದುವೆಗೆ  ಹೋಗಲು ಅವರು ಕಾತರದಿಂದ ಕಾಯುತ್ತಿದ್ದಾರೆ. 

‘ನನ್ನ ಸೋದರ ಸೌರಭ್‌ ಮದುವೆ ಸಮಾರಂಭವನ್ನು ನಾನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬದವರೆಲ್ಲಾ ಆಗಲೇ ಅಲ್ಲಿ ಸೇರಿದ್ದಾರೆ. ಆದರೆ, ನನಗೆ ಇನ್ನೂ ಹೋಗಲಾಗಿಲ್ಲ. ಸದ್ಯದಲ್ಲೇ ನಾನೂ ಬಂದು ನಿಮ್ಮೆಲ್ಲರನ್ನು ಸೇರಿಕೊಳ್ಳುತ್ತೇನೆ. ಆ ಕ್ಷಣಕ್ಕಾಗಿ ನಾನು ತುದಿಗಾಲಲ್ಲಿ ಕಾಯುತ್ತಿದ್ದೇನೆ. ಮದುವೆ ಸಮಾರಂಭಕ್ಕೆ ಬಂದು ಹಾಡಿ–ಕುಣಿದು ಚೋಪ್ರಾ ಸ್ಟೈಲ್‌ ತೋರುತ್ತೇನೆ’ ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ‘ಮಿಸ್‌ ಯೂ ಫ್ಯಾಮಿಲಿ, ಆದಷ್ಟು ಬೇಗ ನಿಮ್ಮನ್ನು ಸೇರಿಕೊಳ್ಳುತ್ತೇನೆ’ ಎಂದು ಬೇಸರ ತುಂಬಿದ ಭಾವದಲ್ಲಿ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.