ADVERTISEMENT

ಕೋಲ್ಕತ್ತ: 8 ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಪಿಟಿಐ
Published 3 ಜನವರಿ 2021, 8:29 IST
Last Updated 3 ಜನವರಿ 2021, 8:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ‘26ನೇ ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 8 ರಿಂದ 15ರವರೆಗೆ ನಡೆಯಲಿದೆ.ಉದ್ಘಾಟನಾ ಕಾರ್ಯಕ್ರಮದಲ್ಲಿ ಸೌಮಿತ್ರ ಚಟರ್ಜಿ ಅಭಿನಯದ ‘ಅಪುರ್‌ ಸಂಸಾರ್‌’ ಸಿನಿಮಾ ಪ್ರದರ್ಶಿಸಲಾಗುವುದು’ ಎಂದು ಪಶ್ಚಿಮ ಬಂಗಾಳದ ಸಚಿವ ಅರೂಪ್‌ ಬಿಸ್ವಾಸ್‌ ಅವರು ತಿಳಿಸಿದರು.

‘ಅಪುರ್‌ ಸಂಸಾರ್‌’ ಚಿತ್ರವನ್ನು ಸತ್ಯಜೀತ್‌ ರೇ ಅವರು ನಿರ್ದೇಶಿಸಿದ್ದಾರೆ. ಸೌಮಿತ್ರ ಚಟರ್ಜಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದಅರೂಪ್‌ ಬಿಸ್ವಾಸ್‌, ‘ಏಳು ದಿನದ ಚಲನಚಿತ್ರೋತ್ಸವದ ಮೂಲಕ ಸತ್ಯಜೀತ್‌ ರೇ ಮತ್ತು ಸೌಮಿತ್ರ ಚಟರ್ಜಿ ಅವರನ್ನು ಸ್ಮರಿಸಲಾಗುವುದು’ ಎಂದರು.

ADVERTISEMENT

‘ಈ ಬಾರಿಯ ಚಲನಚಿತ್ರೋತ್ಸವದಲ್ಲಿ 131 ಸಿನಿಮಾಗಳು ಇರಲಿವೆ. 45 ದೇಶಗಳಿಂದ 1,170 ಸಿನಿಮಾಗಳು ಬಂದಿದ್ದು, ಈ ಪೈಕಿ 131 ಸಿನಿಮಾ ಆರಿಸಿದ್ದೇವೆ’ ಎಂದುಸಾಂಸ್ಕೃತಿಕ ವ್ಯವಹಾರಗಳ ರಾಜ್ಯ ಸಚಿವ ಇಂದ್ರನಿಲ್ ಸೇನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.