ADVERTISEMENT

‘18 ರಿಂದ 25’ ಚಿತ್ರಕ್ಕೆ ಡಬ್ಬಿಂಗ್ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
‘18 ರಿಂದ 25’ ಚಿತ್ರದಲ್ಲಿ ಅಖಿಲಾ
‘18 ರಿಂದ 25’ ಚಿತ್ರದಲ್ಲಿ ಅಖಿಲಾ   

ತುಮಲಪಲ್ಲಿ ರಾಮಸತ್ಯನಾರಾಯಣ ನಿರ್ಮಿಸುತ್ತಿರುವ ‘18 ರಿಂದ 25’ ಚಿತ್ರದ ಡಬ್ಬಿಂಗ್‌ ಕಾರ್ಯ ಇತ್ತೀಚೆಗೆ ರಾಜೇಶ್ ರಾಮನಾಥ್ ಸ್ಟುಡಿಯೊದಲ್ಲಿ ಮುಕ್ತಾಯಗೊಂಡಿತು. ‘ಇದು ಹರೆಯದ ಹೃದಯಗಳ ಮಿಡಿತದ ಎಳೆಯನ್ನಿಟ್ಟುಕೊಂಡು ಅದಕ್ಕೆ ಹಾಸ್ಯ ರಸಾಯನವನ್ನೂ ಸೇರಿಸಿ ಹೆಣೆದ ಕಥೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸ್ಮೈಲ್ ಶ್ರೀನು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಶಿವ ಕೆ. ನಾಯ್ಡು ಛಾಯಾಗ್ರಹಣವಿದೆ.

ಅಭಿರಾಮ್, ರಿಷಿ ತೇಜ, ಅಖಿಲಾ, ವಿದ್ಯಾಶ್ರೀ, ಫಾರುಕ್ ಖಾನ್, ಸುಮನ್, ನಾಗಿನೀಡು, ರವಿರಾಮ್ ಕುಮಾರ್, ರಾಕ್ ಲೈನ್ ಸುಧಾಕರ್, ಮಿಮಿಕ್ರಿ ಗೋಪಿ, ಸೌಮ್ಯಾ, ಕಾವ್ಯಾ, ಮುಂತಾದವರ ತಾರಾಬಳಗವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.