ಮುಂಬೈ:ಇಲ್ಲಿನ ಗೊರೇಗಾಂವ್ ಉಪನಗರದಲ್ಲಿ ಕಳ್ಳತನ ಆರೋಪದಡಿಯಲ್ಲಿ ಮುಂಬೈ ಪೊಲೀಸರು ಇಬ್ಬರು ಕಿರುತೆರೆ ನಟಿಯರನ್ನು ಬಂಧಿಸಿದ್ದಾರೆ.
ಬಂಧಿತ ನಟಿಯರನ್ನು ಸುರಭಿ ಶ್ರೀವಾಸ್ತವ್ (25) ಮತ್ತು ಮೊಹ್ಸಿನಾ ಶೇಖ್ (19) ಎಂದು ಗುರುತಿಸಲಾಗಿದೆ. ಇವರು ₹ 3.28 ಲಕ್ಷ ಕದ್ದ ಆರೋಪದಲ್ಲಿ ಬಂಧಿತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಸಾವ್ಧಾನ್ ಇಂಡಿಯಾ' ಮತ್ತು 'ಕ್ರೈಮ್ ಪ್ಯಾಟ್ರೋಲ್' ಸೇರಿದಂತೆ ವಿವಿಧ ಧಾರಾವಾಹಿ ಹಾಗೂ ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಐಷಾರಾಮಿ ಪೇಯಿಂಗ್ ಗೆಸ್ಟ್ನಲ್ಲಿ ಉಳಿದುಕೊಂಡಿದ್ದ ಈ ನಟಿಯರು ಮಹಿಳೆಯೊಬ್ಬರ ಲಾಕರ್ನಿಂದ ಹಣ ಕದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಣ ಕಳೆದುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಸಿಸಿಟಿವಿ ಪರಿಶೀಲಿಸಿದ ಪೊಲೀಸರು ನಟಿಯರನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.