ADVERTISEMENT

2ಕೆ2ಎಚ್‌ಗೆ 20 ವರ್ಷ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 19:46 IST
Last Updated 17 ಅಕ್ಟೋಬರ್ 2018, 19:46 IST
Mumbai: Bollywood actors Shah Rukh Khan, Rani Mukherjee, Kajol, director Karan Johar with the other members of 'Kuch Kuch Hota Hai' pose for photos to mark the film's 20years of completion, in Mumbai, Tuesday, Oct 16, 2018. (PTI Photo) (PTI10_17_2018_000028B)
Mumbai: Bollywood actors Shah Rukh Khan, Rani Mukherjee, Kajol, director Karan Johar with the other members of 'Kuch Kuch Hota Hai' pose for photos to mark the film's 20years of completion, in Mumbai, Tuesday, Oct 16, 2018. (PTI Photo) (PTI10_17_2018_000028B)   

2k2h ಬಂದು ಆಗಲೇ 20 ವರ್ಷಗಳಾದವೇ ಎಂದು ಹುಬ್ಬೇರಿಸಬಹುದು. ಕುಛ್‌ ಕುಛ್‌ ಹೋತಾ ಹೈ ತ್ರಿಕೋನ ಪ್ರೇಮದ ಈ ಸಿನಿಮಾ ಬಿಡುಗಡೆಯಾಗಿ ಆಗಲೇ 20 ವರ್ಷಗಳಾದವು. ಕರಣ್‌ ಜೋಹರ್‌ ಅವರ ಬ್ಲಾಕ್‌ಬಸ್ಟರ್‌ ಸಿನಿಮಾದಲ್ಲಿ ನಟಿಸಿದ್ದ ಎಲ್ಲ ನಟನಟಿಯರೂ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಕರಣ್‌ಜೋಹರ್‌ಗೆ ಈ ಚಿತ್ರೀಕರಣದ ಪ್ರತಿ ಒಂದು ಕೋನಗಳೂ, ಸನ್ನಿವೇಶಗಳೂ ನೆನಪಿವೆಯಂತೆ. ಪ್ರೇಮಕಥೆಗಳನ್ನು ನಿರ್ದೇಶಿಸುವಾಗ ಮೊದಲು ಹಾಡುಗಳಿಂದಲೇ ಆರಂಭಿಸಬೇಕು, ಈ ಸಲಹೆ ಶಾರುಖ್‌ ಖಾನ್‌ ಕೆಜೊಗೆ ನೀಡಿದ್ದರಂತೆ. ಹಾಗೆ ಹಾಡಿನಿಂದ ಶುರುವಾದರೆ ತಾರೆಗಳೊಂದಿಗೆ ಸಂಬಂಧಗಳು ಸರಳವಾಗಿ, ಮುಂದೆ ಎಂಥದ್ದೇ ಕಠಿಣ ಸನ್ನಿವೇಶವಿದ್ದರೂ ಸ್ನೇಹಮಯ ವಾತಾವರಣದಲ್ಲಿ ನಿಭಾಯಿಸಬಹುದು ಎಂದು ಕಲಿತುಕೊಂಡೆ. ಆ ಚಿತ್ರದಿಂದ ಇಂದಿಗೂ ಮೊದಲು ಹಾಡಿನಿಂದಲೇ ಚಿತ್ರೀಕರಣ ಆರಂಭಿಸುತ್ತೇನೆ ಎಂದು ಅವರು ಹೇಳುತ್ತಾರೆ.

ರಾಹುಲ್‌ ಪಾತ್ರಧಾರಿಯಾಗಿದ್ದ ಶಾರುಖ್‌ಗೆ ಈ ಚಿತ್ರದ ಒಂದು ಸಲ ಹುಟ್ತೀವಿ, ಒಂದು ಸಲ ಸಾಯ್ತೀವಿ. ಒಂದೇ ಸಲ ಪ್ರೀತಿಸುತ್ತೇವೆ. ಮದುವೆಯೂ ಒಂದೇಸಲ ಎಂದು ಹೇಳಿದ್ದ ಡೈಲಾಗ್‌ ಬಲು ಇಷ್ಟವಾಗಿತ್ತಂತೆ. ಹಾಗೆ ಹಗಲೆಲ್ಲ ಹೇಳುತ್ತಲೇ ಎರಡು ಸಲ ಮದುವೆಯಾಗಿದ್ದ ಚಿತ್ರವಿದು, ಎಂದು ನಗೆಚಟಾಕಿಯನ್ನೂ ಹಾರಿಸಿದರು.

ADVERTISEMENT

ಕಾಜೊಲ್‌ಗೆ ಆಫ್‌ಸ್ಕ್ರೀನ್‌ ಸ್ನೇಹಿತರಾಗಿದ್ದರೆ, ಆನ್‌ಸ್ಕ್ರೀನ್‌ ಕೆಮೆಸ್ಟ್ರಿ ಚೆನ್ನಾಗಿರುತ್ತದೆ ಎಂಬ ಸತ್ಯ ಅರಿವಾಗಿದ್ದು ಇದೇ ಚಿತ್ರದ ಸೆಟ್‌ ಮೇಲಂತೆ.

ಎರಡು ದಶಕಗಳ ನಂತರ ಆ ಚಿತ್ರದ ರಾಹುಲ್‌ ಹೇಗಿರಬಹುದು ಎಂಬ ಪ್ರಶ್ನೆಗೆ... ಈ ಯುಗದಲ್ಲಿ ಆ ರಾಹುಲ್‌ ಇದ್ದಿದ್ದರೆ ಇನ್ನೊಂಚೂರು ಫ್ಲರ್ಟ್‌ ಮಾಡಿಕೊಂಡು ಇರುತ್ತಿದ್ದ ಎಂದ ಶಾರುಖ್‌ ಖಾನ್‌... ಪ್ರೀತಿ, ಪ್ರೇಮ ಹಾಗೂ ಮದುವೆಗಳ ಬಗ್ಗೆ ಈ ಚಿತ್ರ ಬಹಳಷ್ಟು ಮಾತಾಡುತ್ತದೆ. ಸನಾ ಸಾಜಿದ್‌ ಗೆ (ಶಾರುಖ್‌ ಖಾನ್‌ ಮಗಳ ಪಾತ್ರ ನಿರ್ವಹಿಸಿದ ಹುಡುಗಿ)ಗೆ ಇಷ್ಟೆಲ್ಲ ಗೊಂದಲಗಳು ಕಾಡುವುದಿಲ್ಲ. 8 ವರ್ಷದ ವಯಸ್ಸಿನಲ್ಲೇ ಕೆಜೊ ಚಿತ್ರದಲ್ಲಿ ನಟಿಸಿದ್ದಾಳೆ ಎಂದೂ ಕಿಂಗ್‌ ಖಾನ್‌ ಹೇಳಿದ್ದಾರೆ.

ಈ ವರ್ಷದಲ್ಲಿ ನಮ್ಮನ್ನಗಲಿದ ರೀಮಾ ಲಾಗೂ ಹೊರತುಪಡಿಸಿದರೆ ಚಿತ್ರದ ತಾರಾಗಣದಲ್ಲಿದ್ದವರೆಲ್ಲ ಮುಂಬೈನಲ್ಲಿ ಏರ್ಪಡಿಸಿದ್ದ ಈ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಲಡಕಾ ಬಡಾ ದೀವಾನಾ ಹೈ... ರಘುಪತಿ ರಾಘವ ರಾಜಾ ರಾಂ ಹಾಡುಗಳು ಮತ್ತೆ ರಿಂಗಣಿಸಿದವು. ಸಹಸ್ರಮಾನದ ಪ್ರೀತಿ, ದಾಂಪತ್ಯ ಹಾಗೂ ಬದ್ಧತೆಯ ಬಗೆಗಿನ ಈ ಚಿತ್ರ ಇಂದಿಗೂ ಹಿಟ್‌ ಚಿತ್ರಗಳ ಸಾಲಿನಲ್ಲಿಯೇ ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.