ADVERTISEMENT

‘ನಾ ಪೇರು ಸೂರ್ಯ’: ಖಡಕ್‌ ಮಿಲಿಟರಿ ಅಧಿಕಾರಿಯಾಗಿ ಅಲ್ಲು ಅರ್ಜುನ್

ಏಜೆನ್ಸೀಸ್
Published 1 ಜನವರಿ 2018, 16:20 IST
Last Updated 1 ಜನವರಿ 2018, 16:20 IST
ಅಲ್ಲು ಅರ್ಜುನ್
ಅಲ್ಲು ಅರ್ಜುನ್   

ಬೆಂಗಳೂರು: ಪ್ರತಿ ಚಿತ್ರದಲ್ಲಿಯೂ ವಿಭಿನ್ನ ಉಡುಗೆ, ಕೇಶವಿನ್ಯಾಸಗಳಿಂದ ಹೊಸತನದೊಂದಿಗೆ ಕಾಣಿಸಿಕೊಳ್ಳುವ ಟಾಲಿವುಡ್‌ ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ‘ನಾ ಪೇರು ಸೂರ್ಯ’ ಚಿತ್ರದಲ್ಲಿಯೂ ತಮ್ಮ ನಾವೀನ್ಯತೆಯನ್ನು ಕಾಯ್ದುಕೊಂಡಿದ್ದಾರೆ.

ಇದೀಗ ಚಿತ್ರ ಕುರಿತಾದ ವಿಡಿಯೊವೊಂದು ಸೋಮವಾರ ಬಿಡುಗಡೆಯಾಗಿದ್ದು, ಮಿಲಿಟರಿ ಅಧಿಕಾರಿಯ ವೇಶದಲ್ಲಿ ಕಾಣಿಸಿಕೊಂಡಿರುವ ಅಲ್ಲು, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಿಸಿದ್ದಾರೆ.

</p><p>ಫಸ್ಟ್‌ಲುಕ್‌ನಲ್ಲಿ ಸ್ಟೈಲಿಶ್‌ ಸ್ಟಾರ್‌ನ ದೇಶಭ‌ಕ್ತಿ ಎದ್ದು ಕಾಣುತ್ತದೆ. ಚಿತ್ರದಲ್ಲಿ ಭಿನ್ನವಾಗಿ ತೆರೆಮೇಲೆ ರಾರಾಜಿಸುವ ಸಲುವಾಗಿ ಅಮೇರಿಕದಲ್ಲಿ ಒಂದು ತಿಂಗಳು ವಿಶೇಷ ದೈಹಿಕ ತರಬೇತಿ ಪಡೆದ ಫಲವೂ ಇದರಲ್ಲಿ‌ ಬಿಂಬಿತವಾಗಿದೆ.</p><p>ಖ್ಯಾತ ಬರಹಗಾರ ವಕ್ಕನಾಥಮ್ ವಂಶಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.</p></p>

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.