ADVERTISEMENT

‘90 ಎಂಎಲ್‌’ಗೆ ಬೆಳಗಿನ ಜಾವದ ಬೇಡಿಕೆ!

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 19:30 IST
Last Updated 28 ಫೆಬ್ರುವರಿ 2019, 19:30 IST
ಒವಿಯಾ (ಚಿತ್ರ: ಸೋಷಿಯಲ್‌ ಮೀಡಿಯಾ)
ಒವಿಯಾ (ಚಿತ್ರ: ಸೋಷಿಯಲ್‌ ಮೀಡಿಯಾ)   

ತಮಿಳಿನ ‘ಬಿಗ್‌ಬಾಸ್‌’ ರಿಯಾಲಿಟಿ ಶೋ ಖ್ಯಾತಿಯ ಒವಿಯಾ ನಟಿಸಿರುವ ‘90ಎಂಎಲ್‌’ ಸಿನಿಮಾ ಇಂದು (ಮಾರ್ಚ್‌ 1) ಬಿಡುಗಡೆಯಾಗಲಿದೆ. ಒಂದೆರಡು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ 5 ಗಂಟೆಗೆ ಶೋ ಶುರುವಾಗಲಿದೆ ಎಂಬ ಮಾತು ಚಿತ್ರದ ಬೇಡಿಕೆಯನ್ನು ಸಾಬೀತು ಮಾಡಿತ್ತು.

ಇದೀಗ, ಬೆಳಗಿನ ಜಾವದ ಶೋ ತೋರಿಸಲು ಇನ್ನಷ್ಟು ಚಿತ್ರಮಂದಿರಗಳು ಆಸಕ್ತಿ ವಹಿಸಿವೆ. ಕಾಮಿಡಿ ಚಿತ್ರ ಎಂದು ಹೇಳಲಾಗಿದ್ದರೂ ಪಕ್ಕಾ ಅಡಲ್ಟ್‌ ಸಿನಿಮಾ ಇದಾಗಿದೆ. ಒವಿಯಾ, ಚಿತ್ರರಂಗದ ಎರಡನೇ ಇನಿಂಗ್ಸ್‌ಗೆ ಸಿಕ್ಕಿದ ಈ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದು, ಮೈಚಳಿ ಬಿಟ್ಟು ನಟಿಸಿದ್ದಾರೆ.

ಕೆಲದಿನಗಳ ಹಿಂದೆ 90ಎಂಎಲ್‌ನ ಹೊಸ ವಿಡಿಯೊವನ್ನು ಚಿತ್ರತಂಡ ಹಂಚಿಕೊಂಡಿತ್ತು. ಒವಿಯಾ ಮೊದಲ ರಾತ್ರಿಯ ಬೆಡ್‌ರೂಂ ದೃಶ್ಯಗಳಲ್ಲಿ ಹಸಿಬಿಸಿಯಾಗಿ ನಟಿಸಿದ್ದಾರೆ. ಒವಿಯಾ, ಬಿಗ್‌ಬಾಸ್‌ ರಿಯಾಲಿಟಿ ಶೋದಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ಕಠಿಣ ಶ್ರಮದ ಸ್ಪರ್ಧಿಯಾಗಿ ಪ್ರೇಕ್ಷಕರ ಮನಗೆದ್ದಿದ್ದರು. ಶೋ ಮುಗಿಯುತ್ತಲೇ ಒವಿಯಾಗೆ ಒಂದಷ್ಟು ಚಿತ್ರಗಳಲ್ಲಿ ಅವಕಾಶ ಹುಡುಕಿಬಂದಿತ್ತು. ಅವರು ಮಾಡಿದ ಮೊದಲ ಕೆಲಸ 90ಎಂಎಲ್‌ ಚಿತ್ರೀಕರಣದಲ್ಲಿ ತೊಡಗಿಸಿಕೊಂಡದ್ದು.

ADVERTISEMENT

ಚಿತ್ರದ ಟ್ರೇಲರ್‌ ಯೂಟ್ಯೂಬ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆದರೆ ತಮ್ಮ ಇಷ್ಟದ ನಟಿಯ ಹಸಿಬಿಸಿ ದೃಶ್ಯಗಳು ಮತ್ತು ಲೈಂಗಿಕ ಸುಖದ ಕುರಿತು ಮುಕ್ತವಾಗಿ ತಮ್ಮ ಸ್ನೇಹಿತೆಯರೊಂದಿಗೆ ಚರ್ಚಿಸುವ ದೃಶ್ಯಗಳು ಅವರ ಅಭಿಮಾನಿಗಳಲ್ಲಿ ಅಸಮಾಧಾನ ತಂದಿತ್ತು.

ಒವಿಯಾ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಚಿತ್ರೀಕರಣದ ಸುದ್ದಿಗಳನ್ನು ಟ್ವೀಟ್‌ ಮೂಲಕ ಅಪ್‌ಡೇಟ್‌ ಮಾಡುತ್ತಲೇ ಇದ್ದರು.

ಅನಿತಾ ಉದೀಪ್ ನಿರ್ದೇಶಿಸಿರುವ 90ಎಂಎಲ್‌ಗೆ ಎನ್ವೀಜ್‌ ಎಂಟರ್‌ಟೇನ್‌ಮೆಂಟ್‌ನ ಉದೀಪ್‌ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.