ADVERTISEMENT

ಅವಿವಾಹ ಸಮಸ್ಯೆ ಬಿತ್ತರಿಸುವ ಚಲನಚಿತ್ರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 2:19 IST
Last Updated 24 ಡಿಸೆಂಬರ್ 2021, 2:19 IST
ಹೇಮಂತ್ ಹೆಗಡೆ
ಹೇಮಂತ್ ಹೆಗಡೆ   

ಶಿರಸಿ: ಕೃಷಿ ಕಾರ್ಯದಲ್ಲಿ ತೊಡಗಿದ ಯುವಕರಿಗೆ ವಿವಾಹಕ್ಕೆ ವಧು ದೊರೆಯದ ಸಮಸ್ಯೆ ಪ್ರಧಾನವಾಗಿಟ್ಟು ಹಾಸ್ಯಭರಿತ ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರ ನಿರ್ಮಿಸಲಾಗುತ್ತಿದೆ ಎಂದು ಚಲನಚಿತ್ರ ನಿರ್ದೇಶಕ ಹೇಮಂತ್ ಹೆಗಡೆ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಣಿ ಪಾತ್ರದಲ್ಲಿ ತಾವೇ ನಟಿಸುತ್ತಿದ್ದು, ನಟಿಯರಾದ ಲೋಪಮುದ್ರಾ ರಾವತ್, ಶ್ರೇಯಾ ವಸಂತ್, ಶೃತಿ ನಂದೀಶ ಮುಖ್ಯ ಪಾತ್ರದಲ್ಲಿರಲಿದ್ದಾರೆ. ಎರಡೂವರೆ ಕೋಟಿ ಮೊತ್ತದ ಬಜೆಟ್ ಚಿತ್ರ ಇದಾಗಿರಲಿದೆ’ ಎಂದು ತಿಳಿಸಿದರು.

‘ಮದುವೆಯಾಗಲು ಸಾಮಾನ್ಯ ಕೃಷಿ ಕುಟುಂಬದ ತರುಣ ಪರದಾಡುವ ಪ್ರಸಂಗದ ಸುತ್ತ ಕಥೆ ಹೆಣೆದುಕೊಂಡಿದೆ. ಸಾಮಾಜಿಕ ಸಮಸ್ಯೆ ಅನಾವರಣಗೊಳಿಸುವ ಜತೆಗೆ ಅದಕ್ಕೆ ಪರಿಹಾರ ಸೂಚಿಸುವ ಸಂದೇಶವನ್ನು ಚಿತ್ರ ಸಾರಲಿದೆ’ ಎಂದರು.

ADVERTISEMENT

‘ಫೆಬ್ರುವರಿ ಮೊದಲ ವಾರ ಚಿತ್ರೀಕರಣ ಆರಂಭಗೊಳ್ಳಲಿದ್ದು, ಶಿರಸಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೇ 70ರಷ್ಟು ಚಿತ್ರೀಕರಣ ನಡೆಯಲಿದೆ. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡುವ ದೃಷ್ಟಿಯಿಂದ ಅವರ ಆಯ್ಕೆಗೆ ಜ.2 ರಂದು ಶಿರಸಿಯಲ್ಲಿ ಆಡಿಷನ್ ನಡೆಸಲಾಗುವುದು’ ಎಂದರು.

ಕಲಾವಿದರಾದ ರವಿ ಮುರೂರು, ಋತೀಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.