ADVERTISEMENT

ಅಮೀರ್ಆಸ್ತಿ ಖರೀದಿ

ಅಮೀರ್ ಖಾನ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:30 IST
Last Updated 18 ಜೂನ್ 2019, 19:30 IST
ಅಮೀರ್ ಖಾನ್ 
ಅಮೀರ್ ಖಾನ್    

ಬೆಳ್ಳಿತೆರೆಯಿಂದ ಕೆಲಕಾಲ ಮರೆಯಾಗಿರುವ ಅಮೀರ್ ಖಾನ್ ಈಗೇನು ಮಾಡುತ್ತಿರಬಹುದು ಅನ್ನುವ ಪ್ರಶ್ನೆ ಆತನ ಅಭಿಮಾನಿಗಳದ್ದು. ಸೃಜನಶೀಲವಾಗಿರುವ ಅಮೀರ್ ಸುಮ್ಮನೆ ಕೂರುವ ಜಾಯಮಾನದವರಲ್ಲ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಏನಾದರೊಂದು ಸುದ್ದಿ ಹಂಚಿಕೊಳ್ಳುವ ಅಮೀರ್, ತಮ್ಮ ಪ್ರೊಡಕ್ಷನ್ ಹೌಸ್ ವಿಸ್ತರಣೆಗಾಗಿ ಈಚೆಗೆ ಆಸ್ತಿ ಖರೀದಿಸಿದ್ದಾರಂತೆ.

ವಾಣಿಜ್ಯ ಉದ್ದೇಶ ಮತ್ತು ಪ್ರೊಡಕ್ಷನ್ ಹೌಸ್ ವಿಸ್ತರಣೆಗಾಗಿ ಅಮೀರ್ ಸುಮಾರು ₹ 35 ಕೋಟಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರಂತೆ. ಈ ಸ್ಥಳವನ್ನು ‘ಅಮೀರ್ ಖಾನ್ ಪ್ರೊಡಕ್ಷನ್ ಪ್ರೈ. ಲಿ.’ ಹೆಸರಿನಲ್ಲಿಯೇ ಅಮೀರ್ ನೋಂದಣಿ ಮಾಡಿಸಲಿದ್ದಾರಂತೆ.

ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಜೋಡಿ ಶೀಘ್ರದಲ್ಲೇ ಹೊಸ ಸಿನಿಮಾವೊಂದರಲ್ಲಿ ನಟಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.