ADVERTISEMENT

'ಮಿರ್ಜಾಪುರ್' ವೆಬ್ ಸಿರೀಸ್ ನಟ ಬ್ರಹ್ಮಸ್ವರೂಪ್ ಮಿಶ್ರಾ ಅನುಮಾನಾಸ್ಪದ ಸಾವು

ಪಿಟಿಐ
Published 2 ಡಿಸೆಂಬರ್ 2021, 15:55 IST
Last Updated 2 ಡಿಸೆಂಬರ್ 2021, 15:55 IST
ಬ್ರಹ್ಮಸ್ವರೂಪ್ ಮಿಶ್ರಾ
ಬ್ರಹ್ಮಸ್ವರೂಪ್ ಮಿಶ್ರಾ    

ಮುಂಬೈ: ಮಿರ್ಜಾಪುರ್ ವೆಬ್‌ ಸಿರೀಸ್‌ನಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ನಟ ಬ್ರಹ್ಮಸ್ವರೂಪ್ ಮಿಶ್ರಾ (36) ಮುಂಬೈನ ಅವರ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಅವರು ವರ್ಸೋವಾದ ಇನ್‌ಲೆಕ್ಸ್‌ನಗರದ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ವಾಸವಾಗಿದ್ದರು.

‘ಗುರುವಾರ ಮನೆಯಿಂದ ಕೊಳೆತ ವಾಸನೆ ಹೊರ ಬಂದಾಗ ಅಲ್ಲಿನ ನಿವಾಸಿಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಬಂದು ಬಾಗಿಲು ತೆರೆದಾಗ ಮಿಶ್ರಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಶೌಚಾಲಯದಲ್ಲಿ ಪತ್ತೆಯಾಗಿದೆ’ ಎಂದು ಪಿಟಿಐ ವರದಿ ಮಾಡಿದೆ.

ADVERTISEMENT

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. 8 ಎಪಿಸೋಡ್‌ಗಳಲ್ಲಿ ಮಿರ್ಜಾಪುರ್ ಕ್ರೈಂ ಥ್ರಿಲ್ಲರ್ ವೆಬ್‌ ಸಿರೀಸ್ ಅಮೆಜಾನ್‌ ಫ್ರೈಮ್‌ನಲ್ಲಿ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.