ADVERTISEMENT

ಮೈನಾ ಹುಡುಗನ ಜೊತೆಯಾದ ಮೇಘಾ: ಪ್ರೀತಿಸಿದ ಹು‍ಡುಗಿಯೊಂದಿಗೆ ಚೇತನ್‌ ವಿವಾಹ ನಿಶ್ಚಯ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 7:08 IST
Last Updated 24 ಜನವರಿ 2020, 7:08 IST
ಚೇತನ್‌ ಮತ್ತು ಮೇಘಾ
ಚೇತನ್‌ ಮತ್ತು ಮೇಘಾ   

ಬೆಂಗಳೂರು: ಆ ದಿನಗಳು ಮತ್ತು ಮೈನಾ ಸಿನಿಮಾಖ್ಯಾತಿಯ ನಟ ಚೇತನ್‌ ವಿವಾಹ ನಿಶ್ಚಯವಾಗಿದ್ದು ಬರುವ ಫೆಬ್ರುವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವಮೇಘಾ ಎಸ್.‌ಅವರೊಂದಿಗೆ ಸರಳವಾಗಿ ವಿವಾಹವಾಗಲಿದ್ದಾರೆ. ಈ ಬಗ್ಗೆ ಚೇತನ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಕಲ್ಲರ್ಫುಲ್!ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಚೇತನ್‌,ಮೇಘಾ ಅವರೊಂದಿಗಿರುವ ಫೋಟೊವನ್ನು ಹಾಕಿದ್ದಾರೆ.

ADVERTISEMENT

ಚೇತನ್‌ ಮತ್ತು ಮೇಘಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮೇಘಾ ಉತ್ತರ ಭಾರತ ಮೂಲದವರು. ಅನಾಥಶ್ರಮವೊಂದರಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ ಎನ್ನಲಾಗಿದ್ದುಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ.

2007ರಲ್ಲಿ ಆ ದಿನಗಳು ಸಿನಿಮಾದ ಮೂಲಕ ಚೇತನ್‌ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಚಿತ್ರದಲ್ಲೇ ಚೇತನ್‌ ಭರವಸೆ ಮೂಡಿಸಿದ್ದರು. ಸಿನಿಮಾದ ಜೊತೆ ಜೊತೆಗೆ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.