ADVERTISEMENT

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 13:52 IST
Last Updated 20 ಡಿಸೆಂಬರ್ 2024, 13:52 IST
ನಟ ದರ್ಶನ್‌
ನಟ ದರ್ಶನ್‌   

ಮೈಸೂರು: ಚಲನಚಿತ್ರ ನಟ ದರ್ಶನ್‌ ತೂಗುದೀಪ ಅವರು ಜಿಲ್ಲೆಯ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಅಕ್ಕನ ಮಗ ಚಂದನ್‌ ಅವರೊಂದಿಗೆ ಶುಕ್ರವಾರ ಇಲ್ಲಿಗೆ ಬಂದರು. ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್‌ ಜೊತೆಗೆ ಅವರಿದ್ದಾರೆ. ಗೇಟನ್ನು ಟಾರ್ಪಲ್‌ನಿಂದ ಮುಚ್ಚಲಾಗಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ಅವರು, ಜಾಮೀನಿನ ಮೇಲೆ ಕಾರಾಗೃಹದಿಂದ ಹೊರಬಂದಿದ್ದಾರೆ. ಬೆಂಗಳೂರಿನ ಸಿಸಿಎಚ್‌ 57ನೇ ಸೆಷನ್ಸ್‌ ನ್ಯಾಯಾಲಯವು ಶುಕ್ರವಾರದಿಂದ (ಡಿ.25) ಮುಂದಿನ ವರ್ಷದ ಜ. 5ರವರೆಗೆ ಮೈಸೂರಿಗೆ ತೆರಳಲು ಗುರುವಾರ ಅವಕಾಶ ನೀಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.