ADVERTISEMENT

ರಿಮೇಕ್ ಚಿತ್ರದಲ್ಲಿ ದಿಗಂತ್ ನಟನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 19:45 IST
Last Updated 14 ಏಪ್ರಿಲ್ 2020, 19:45 IST
ನಟ ದಿಗಂತ್
ನಟ ದಿಗಂತ್   

ನಟ ಅಡವಿ ಶೇಷ ಮತ್ತು ನಟಿ ರೆಜಿನಾ ಅಭಿನಯಿಸಿದ್ದ ತೆಲುಗಿನ ‘ಎವರು’ ಚಿತ್ರ ಕಳೆದ ವರ್ಷ ತೆರೆಕಂಡಿತ್ತು.ಇದಕ್ಕೆಪ್ರೇಕ್ಷಕರಿಂದಲೂ ಉತ್ತಮ‌ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ವೆಂಕಟ್ ರಾಮ್ ಜೀ. ಇದಕ್ಕೆ ಸ್ಫೂರ್ತಿಯಾಗಿದ್ದು ಸ್ಪ್ಯಾನಿಷ್‌ನ ‘ದಿ ವಿಜಿಬಲ್ ಗೆಸ್ಟ್’ ಸಿನಿಮಾ.

ಥ್ರಿಲ್ಲರ್ ಸಿನಿಮಾ ಇದು. ಪಿವಿಪಿ ಸಿನಿಮಾಸ್ ಅಡಿ ಇದನ್ನು ನಿರ್ಮಿಸಲಾಗಿತ್ತು. ಪೊಲೀಸ್ ಅಧಿಕಾರಿಯ ಸುತ್ತ ಹೆಣೆದ ಕಥೆ ಇದಾಗಿದೆ‌.
ಈಗ ಈ ಸಿನಿಮಾವು ಕನ್ನಡದಲ್ಲಿ ರಿಮೇಕ್ ಆಗುತ್ತಿದೆ. ನಟ ದಿಗಂತ್ ಅವರು ಅಡವಿ ಶೇಷ‌‌‌ ನಟಿಸಿದ್ದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಲಾಕ್ ಡೌನ್ ಅವಧಿ‌ ಮುಗಿದ ಬಳಿಕ ಶೂಟಿಂಗ್ ಆರಂಭವಾಗುವ ನಿರೀಕ್ಷೆಯಿದೆ.

ಪ್ರಸ್ತುತ ದಿಗಂತ್ ಅವರು ‘ಹುಟ್ಟುಹಬ್ಬದ ಶುಭಾಷಯಗಳು’, ‘ವೇರ್ ಈಸ್ ಮೈ‌ ಕನ್ನಡಕ’, ‘ಮ್ಯಾರಿ ಗೋಲ್ಡ್’ ಮತ್ತು ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಪುನೀತ್ರಾಜ್‍ಕುಮಾರ್ ನಟನೆಯ ‘ಯುವರತ್ನ’ ಚಿತ್ರದ ಮುಖ್ಯಪಾತ್ರದಲ್ಲೂ ನಟಿಸಿದ್ದಾರೆ.

ADVERTISEMENT

ತೆಲುಗಿನ‌ ಮೂಲ ಚಿತ್ರದಲ್ಲಿ‌‌ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ಕನ್ನಡ ರಿಮೇಕ್ ನಲ್ಲಿಯೂ‌ ಕೆಲಸ‌ ಮಾಡುವ ನಿರೀಕ್ಷೆಯಿದೆ. ಕೊರೊನಾ ಸೋಂಕಿನ‌ ಭೀತಿ‌ ಕಡಿಮೆಯಾದ ಬಳಿಕ ಸಿನಿಮಾ ಕುರಿತು ಅಧಿಕೃತ ಘೋಷಣೆ ಆಗಲಿದೆ. ಚಿತ್ರಕ್ಕೆ ನಾಯಕಿ ಯಾರೆಂಬುದು ಇನ್ನೂ ಅಧಿಕೃತಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.