ಬೆಂಗಳೂರು: ಕಳ್ಳತನ ಮಾಡಲು ನನ್ನ ಮನೆಗೆ ಬಂದು, ನನ್ನ ಮೇಲೆ ದಾಳಿ ಮಾಡಿದ ಕಳ್ಳ ನನಕ್ಕಿಂತಲೂ ಹೆಚ್ಚು ಸಂಕಷ್ಟಕ್ಕೆ ಸಿಲುಕಿಕೊಂಡ ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಹೇಳಿದ್ದಾರೆ.
ದೆಹಲಿ ಟೈಮ್ಸ್ ವಾಹಿನಿ ಜೊತೆ ಮಾತನಾಡಿರುವ ಅವರು, ದಾಳಿ ನಡೆಸಿದ್ದ ಕಳ್ಳನ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ.
ಇಂತಹ ಘಟನೆ ಆಗಬಾರದಿತ್ತು. ನಾನು ನಿರೀಕ್ಷಿಸಿರಲಿಲ್ಲ. ಆದರೆ, ಕಳ್ಳತನ ಮಾಡುವ, ಅಪರಾಧ ಕೃತ್ಯಗಳನ್ನು ಎಸುಗುವ ಎಲ್ಲರಿಗೂ ಒಂದಲ್ಲ ಒಂದು ರೀತಿ ಶಿಕ್ಷೆ ಕಾದಿರುತ್ತದೆ. ನೋಡಿ ಇವಾಗ ನನ್ನ ಮೇಲೆ ದಾಳಿ ಮಾಡಿದಾತ, ಕಳ್ಳತನ ಮಾಡಲು ಬಂದು ನನಕ್ಕಿಂತ ಹೆಚ್ಚು ತೊಂದರೆಗೆ ಸಿಲುಕಿದ್ದಾನೆ ಎಂದು ಹೇಳಿದ್ದಾರೆ.
ಮನೆಯಲ್ಲಿ ಗನ್, ಗನ್ ಮ್ಯಾನ್ ಹಾಗೂ ಹೆಚ್ಚುವರಿ ಸೆಕ್ಯೂರಿಟಿಗಳನ್ನು ಇಟ್ಟುಕೊಳ್ಳುತ್ತಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಅವರು, ಇದರಲ್ಲಿ ನನಗೆ ನಂಬಿಕೆ ಇಲ್ಲ. ಏನು ನಡೆಯಬೇಕೋ ಅದು ನಡೆಯುತ್ತದೆ. ಆ ರೀತಿ ಪರಿಸ್ಥಿತಿ ನಿರ್ಮಿಸಿಕೊಳ್ಳುವುದು ನನಗೆ ದುಸ್ವಪ್ನಕ್ಕೆ ಸಮ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬೈ ಪೊಲೀಸರು ತ್ವರಿತವಾಗಿ ಹಾಗೂ ಉತ್ತಮವಾಗಿ ತನಿಖೆ ಮಾಡಿದ್ದಾರೆ. ಮುಂಬೈ ಸುರಕ್ಷಿತ ನಗರ ಎಂದು ನಾನು ನಂಬುತ್ತೇನೆ. ಆದರೆ, ಇಂತಹ ಘಟನೆಗಳು ಲಂಡನ್, ನ್ಯೂಯಾರ್ಕ್‌ನಲ್ಲೂ ನಡೆಯುತ್ತವೆ. ಈಗಿನ ಕಾಲದಲ್ಲಿ ನಾವು ಎಷ್ಟು ಎಚ್ಚರವಾಗಿದ್ದರೂ ಕಡಿಮೆಯೇ ಎಂದು ಹೇಳಿದ್ದಾರೆ.
ಬಾಂದ್ರಾದದಲ್ಲಿರುವ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಲ್ಲಿರುವ ಸೈಫ್ ಅಲಿ ಖಾನ್ ಮನೆಗೆ ಜ. 16ರಂದು ನುಗ್ಗಿದ್ದ ಆರೋಪಿ, ಚೂರಿಯಲ್ಲಿ ಸತತವಾಗಿ ಇರಿದಿದ್ದ. ಗಾಯಗೊಂಡಿದ್ದ 54 ವರ್ಷದ ಸೈಫ್, ಲೀಲಾವತಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಂಡು ಐದು ದಿನಗಳ ಬಳಿಕ ಬಿಡುಗಡೆಗೊಂಡಿದ್ದರು.
ಪೊಲೀಸರು ಆತನನ್ನು ಠಾಣೆಯಲ್ಲಿ ಬಂಧಿಸಿದ್ದು, ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್‌ಗೆ ಬದಲಾಗಿ ಬಿಜೊಯ್ ದಾಸ್ ಎಂದು ಹೆಸರು ಬದಲಿಸಿಕೊಂಡಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.