ತೆಲುಗಿನ ‘ಸನ್ ಆಫ್ ಸತ್ಯಮೂರ್ತಿ’ ಸಿನಿಮಾದಲ್ಲೇ ತಮ್ಮ ಖದರ್ ತೋರಿಸಿದ್ದ ನಟ ಉಪೇಂದ್ರ ಇದೀಗ ‘ಆಂಧ್ರ ಕಿಂಗ್ ಸೂರ್ಯ’ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗಷ್ಟೇ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ಮಿಂಚಿದ್ದ ಉಪೇಂದ್ರ ಅವರು ನಟಿಸಿರುವ ‘ಆಂಧ್ರ ಕಿಂಗ್ ತಾಲೂಕಾ’ ನ.28ರಂದು ತೆರೆಕಾಣುತ್ತಿದೆ. ಈ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ತೆಲುಗಿನ ಸ್ಟಾರ್ ಹೀರೊ ‘ಸೂರ್ಯ’ ಆಗಿ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಈ ಹೀರೊನ ಅಭಿಮಾನಿಯ ಸುತ್ತ ಈ ಸಿನಿಮಾದ ಕಥೆಯಿದೆ. ಹೀಗಾಗಿಯೇ ಸಿನಿಮಾಗೆ ಅಭಿಮಾನಿಯೊಬ್ಬನ ಆತ್ಮಕಥೆ ಎಂಬ ಅಡಿಬರಹವಿದೆ.
ರಾಮ್ ಪೋತಿನೇನಿ ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟೀಸರ್‌ನಲ್ಲಿ ಕೇವಲ ಉಪೇಂದ್ರ ಕಟೌಟ್‌ಗಳನ್ನಷ್ಟೇ ತೋರಿಸಲಾಗಿದ್ದು, ಅವರು ನಟಿಸಿರುವ ದೃಶ್ಯಗಳು ಇಲ್ಲ. ಮಧ್ಯಮ ವರ್ಗದ ಕುಟುಂಬದ ಯುವಕನೊಬ್ಬ ‘ಆಂಧ್ರ ಕಿಂಗ್’ ಅಪ್ಪಟ ಅಭಿಮಾನಿ. ಆತನ ಹಾಗೂ ಉಪೇಂದ್ರ ಪಾತ್ರದ ನಡುವಿನ ಭಾವನಾತ್ಮಕ ಕಥೆಯನ್ನು ಸಿನಿಮಾ ಹೊಂದಿದೆ ಎಂದಿದೆ ಚಿತ್ರತಂಡ. ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾ ನಿರ್ದೇಶಿಸಿದ್ದ ಮಹೇಶ್ ಬಾಬು ಪಿ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.