ADVERTISEMENT

ಚಾಲೆಂಜಿಂಗ್ ಪಾತ್ರ ನಿರೀಕ್ಷೆಯಲ್ಲಿ ಭೂಮಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 19:30 IST
Last Updated 7 ಜುಲೈ 2019, 19:30 IST
ಭೂಮಿ ಪಡ್ನೇಕರ್‌
ಭೂಮಿ ಪಡ್ನೇಕರ್‌   

ಅಕ್ಷಯ್‌ ಕುಮಾರ್‌ ಅವರೊಂದಿಗೆ ‘ಟಾಯ್ಲೆಟ್‌: ಏಕ್‌ ಪ್ರೇಮ್‌ ಕತಾ’ ಸಿನಿಮಾದಲ್ಲಿ ಪ್ರಬುದ್ಧ ನಟನೆಯಿಂದ ಗುರುತಿಸಿಕೊಂಡಿರುವ ಭೂಮಿ ಪಡ್ನೇಕರ್ ಈಗ ಸವಾಲಿನ ಪಾತ್ರದ ನಿರೀಕ್ಷೆಯಲ್ಲಿದ್ದಾರಂತೆ.

ಪ್ರಸ್ತುತ ಆರು ಸಿನಿಮಾಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಎಲ್ಲಾ ಸಿನಿಮಾಗಳು ಬಿಡುಗಡೆಯಾಗಲಿವೆ. ಮುಂದಿನ ದಿನಗಳಲ್ಲಿ ಸವಾಲಿನ ಪಾತ್ರಗಳ ಕಡೆ ಗಮನಕೊಡುವುದಾಗಿ ಅವರು ಹೇಳಿಕೊಂಡಿದ್ದಾರೆ.

2015ರಲ್ಲಿ ಅವರು ‘ದಮ್‌ ಲಗಾ ಕೆ ಐಸಾ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2017ರಲ್ಲಿ ‘ಶುಭ್‌ ಮಂಗಲ್‌ ಸಾವದಾನ್‌’ ಚಿತ್ರದಲ್ಲಿ ನಟಿಸಿದ್ದಾರೆ.‘ನಟಿಯಾಗಿ ನನ್ನ ಕೆಲಸ ಹೆಚ್ಚಿರಬೇಕು. ಪ್ರತಿ ಪಾತ್ರದಿಂದ ಹೊಸ ವಿಷಯ ಕಲಿಯುವಂತಿರಬೇಕು. ಮರೆಯಲಾಗದ ಪಾತ್ರ ಆಗಿರಬೇಕು’ ಎಂದು ನಟಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ADVERTISEMENT

‘ಟಾಯ್ಲೆಟ್‌’ ಸಿನಿಮಾದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶ ಇದೆ. ಈ ರೀತಿಯ ಪಾತ್ರಗಳನ್ನು ಮಾಡಿದಾಗ ಸಿಗುವ ಖುಷಿಯೇ ಬೇರೆ’ ಎಂದಿದ್ದಾರೆ.‘ಸಾಂಡ್‌ ಕಿ ಆಂಖ್‌’ ಸಿನಿಮಾ ಶೂಟಿಂಗ್‌ ಮುಗಿಸಿದ್ದಾರೆ. ತಾಪ್ಸಿ ಪನ್ನು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.