ADVERTISEMENT

ಡ್ರಗ್ಸ್ ಜಾಲ: ನಟಿ ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 10:26 IST
Last Updated 24 ಸೆಪ್ಟೆಂಬರ್ 2020, 10:26 IST
ಸಂಜನಾ
ಸಂಜನಾ   

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಲಾಗಿದೆ.

ಸಂಜನಾ ಪರ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯ, ಸಿಸಿಬಿ ಪೊಲೀಸರ ಪರ ವಕೀಲರ ಆಕ್ಷೇಪಣೆಯನ್ನೂ ಗುರುವಾರ ದಾಖಲಿಸಿಕೊಂಡಿತು. ಪ್ರಕರಣದ ತನಿಖಾಧಿಕಾರಿಯು 20ಕ್ಕೂ ಹೆಚ್ಚು ಪುಟಗಳ ಆಕ್ಷೇಪಣೆಯನ್ನು ನ್ಯಾಯಾಲಯಕ್ಕೆ ನೀಡಿದರು.

ಆಕ್ಷೇಪಣೆ ಪರಿಶೀಲಿಸಿದ ನ್ಯಾಯಾಲಯ, ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 28ಕ್ಕೆ ಮುಂದೂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.